ಅಶ್ವಿನಿ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ ವೈರಲ್
ಪುನೀತ್ ಬದುಕಿದ್ದಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋ ಪ್ರಕಟಿಸಿ ಅಭಿಮಾನಿಗಳಿಗೂ ಸ್ಪೂರ್ತಿ ನೀಡುತ್ತಿದ್ದರು. ಇದೀಗ ಅಶ್ವಿನಿ ಕೂಡಾ ಪುನೀತ್ ರಂತೇ ವರ್ಕೌಟ್ ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತಿಯ ನಿಧನದ ಬಳಿಕ ಅಶ್ವಿನಿ ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಬಿಟ್ಟರೆ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದೇ ಅಪರೂಪ. ಆದರೆ ಅಶ್ವಿನಿ ಫಿಟ್ನೆಸ್ ಗಾಗಿ ವರ್ಕೌಟ್ ಮಾಡುವ ರೀತಿ ನೋಡಿ ಅಭಿಮಾನಿಗಳೂ ಬೆರಗಾಗಿದ್ದಾರೆ.