ಹಿಂದಿ ಮಾತಾಡಿದ್ದಕ್ಕೆ ಯಶ್ ಟ್ರೋಲ್: ಆದರೆ ಅಸಲಿ ವಿಷಯವೇ ಬೇರೆ!
ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಪ್ರಧಾನಿ ಮೋದಿ ಭೇಟಿ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡುವಾಗ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದರು. ಇದಕ್ಕೆ ಕೆಲವರು ಯಶ್ ರನ್ನು ಟ್ರೋಲ್ ಮಾಡಿದ್ದರು. ಕನ್ನಡ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಅಸಲಿಗೆ ಕಾರಣ ಬೇರೆಯೇ ಇದೆ. ಯಶ್ ಈ ರೀತಿ ಸಂದರ್ಶನ ನೀಡಿದ್ದು ಪ್ರಧಾನಿ ಮೋದಿಯವರ ಯೂ ಟ್ಯೂಬ್ ಚಾನೆಲ್ ಗೆ. ಹೀಗಾಗಿ ಅವರು ಹಿಂದಿ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಮಾತನಾಡಿದರು. ಇದರಲ್ಲೂ ತಪ್ಪು ಹುಡುಕಬೇಡಿ ಎಂದು ಯಶ್ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ.