ಕಿಚ್ಚ ನಿಮಗೆ ರಾಜಕೀಯ ಬೇಡ! ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಫ್ಯಾನ್ಸ್ ಬೇಡಿಕೆ

ಗುರುವಾರ, 16 ಫೆಬ್ರವರಿ 2023 (09:10 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಪಕ್ಷಕಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಅಭಿಮಾನಿಗಳು ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.

ಇತ್ತೀಚೆಗೆ ಸುದೀಪ್ ರನ್ನು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ ಫೋಟೋಗಳು ವೈರಲ್ ಆಗಿತ್ತು. ಹೀಗಾಗಿ ನೀವು ಕಾಂಗ್ರೆಸ್ ಸೇರ್ಪಡೆಯಾಗುತ್ತೀರಾ ಎಂದು ಕಿಚ್ಚನಿಗೆ ಕೇಳಲಾಗಿತ್ತು. ಆಗ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಿರುವುದು ನಿಜ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದಾರೆ. ಆದರೆ ಅದರ ಬಗ್ಗೆ ನಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದರು.

ಕಿಚ್ಚನ ಬಗ್ಗೆ ಇಂತಹದ್ದೊಂದು ಸುದ್ದಿ ಬರುತ್ತಿದ್ದಂತೇ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ದಯವಿಟ್ಟು ನೀವು ರಾಜಕೀಯಕ್ಕೆ ಹೋಗಬೇಡಿ. ಇಷ್ಟೊಂದು ಜನರ ಪ್ರೀತಿ ಸಂಪಾದಿಸಿರುವ ನೀವು ನೀವಾಗಿಯೇ ಇರಿ. ರಾಜಕೀಯಕ್ಕೆ ಹೋಗಿ ಅಭಿಮಾನ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ