ರಾಜಸ್ಥಾನ್ ನಲ್ಲಿ ಯಶ್-ರಾಧಿಕಾ ವ್ಯಾಲೆಂಟೈನ್ಸ್ ಡೇ

ಬುಧವಾರ, 15 ಫೆಬ್ರವರಿ 2023 (09:00 IST)
Photo Courtesy: Instagram
ಉದಯಪುರ: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಿನ್ನೆ ವ್ಯಾಲೆಂಟೈನ್ಸ್ ದಿನವನ್ನು ರಾಜಸ್ಥಾನ್ ನಲ್ಲಿ ಆಚರಿಸಿಕೊಂಡಿದ್ದಾರೆ.

ಮಕ್ಕಳನ್ನು ಬಿಟ್ಟು ಯಶ್ ಮತ್ತು ರಾಧಿಕಾ ಉದಯಪುರಕ್ಕೆ ಖಾಸಗಿ ವಿಮಾನದಲ್ಲಿ ತೆರಳಿದ್ದರು. ಈ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ನಿನ್ನೆ ರಾತ್ರಿ ಯಶ್ ಜೊತೆ ರಾಜಸ್ಥಾನ್ ನ ಸುಂದರ ತಾಣದಲ್ಲಿ ರಾಧಿಕಾ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಹಲವು ವರ್ಷ ಪ್ರೀತಿಸಿ ಬಳಿಕ ಮದುವೆಯಾದ ಜೋಡಿ. ಪ್ರತೀ ವರ್ಷ ಪ್ರೇಮಿಗಳ ದಿನವನ್ನು ಇಬ್ಬರೂ ಖುಷಿಯಿಂದ ಕಳೆಯುತ್ತಾರೆ. ಈಗ ಖಾಸಗಿ ಕ್ಷಣಗಳನ್ನು ಕಳೆಯುವುದಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ