ಫ್ಯಾನ್ಸ್ ಗೆ ಪುನೀತ್ ಪತ್ನಿ ಅಶ್ವಿನಿ ಬರೆದ ಪತ್ರ ವೈರಲ್
ಅಶ್ವಿನಿ ಪುನೀತ್ ಇಷ್ಟು ದಿನ ತಮ್ಮ ಜೊತೆಗಿದ್ದು, ತಾವೂ ನೋವು ಅನುಭವಿಸಿದ ಅಭಿಮಾನಿಗಳಿಗೆ ಪತ್ರಮುಖೇನ ಧನ್ಯವಾದ ಸಲ್ಲಿಸಿದ್ದಾರೆ.
ಪುನೀತ್ ಅಗಲುವಿಕೆ ನಮ್ಮಷ್ಟೇ ನಿಮಗೂ ನೋವು ತಂದಿದೆ ಎಂದು ನನಗೆ ಗೊತ್ತು. ಆದರೆ ಇಂಥಾ ಕಠಿಣ ಪರಿಸ್ಥಿತಿಯಲ್ಲೂ ನೋವು ನುಂಗಿ ಎಲ್ಲಾ ಕಾರ್ಯಗಳನ್ನು ಶಾಂತ ರೀತಿಯಲ್ಲಿ ಮಾಡಲು ಅನುವು ಮಾಡಿಕೊಟ್ಟ ನಿಮಗೆ ಧನ್ಯವಾದಗಳು. ನಿಮ್ಮ ಮೆಚ್ಚಿನ ಅಪ್ಪು ಸಮಾಜಕಾರ್ಯಗಳನ್ನು ಆದರ್ಶವಾಗಿಟ್ಟುಕೊಂಡು ನೇತ್ರದಾನ, ಸಮಾಜ ಸೇವೆ ಮಾಡಲು ಮುಂದಾಗಿರುವ ನೀವೆಲ್ಲಾ ಅಭಿನಂದನಾರ್ಹರು. ಅವರು ಯಾವತ್ತೂ ನಿಮ್ಮ ಒಳ್ಳೆಯ ಕೆಲಸಗಳಲ್ಲಿ ಜೀವಂತವಾಗಿರುತ್ತಾರೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ನಾನು ಮತ್ತು ಕುಟುಂಬದವರು ಅಭಾರಿಗಳಾಗಿರುತ್ತೇವೆ ಎಂದು ಅಶ್ವಿನಿ ಪತ್ರದಲ್ಲಿ ಹೇಳಿದ್ದಾರೆ.