ಆಟಕ್ಕುಂಟು ಲೆಕ್ಕಕ್ಕಿಲ್ಲ: ಸೈಕಾಲಾಜಿಕಲ್ ಥ್ರಿಲ್ಲರ್ಗೆ ಗ್ರಾಫಿಕ್ಸ್ ಚಿತ್ತಾರ!

ಸೋಮವಾರ, 16 ಸೆಪ್ಟಂಬರ್ 2019 (16:48 IST)
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಶುರುವಾಗಿರೋ ಹೊಸಾ ಅಲೆಯ ಚಿತ್ರಗಳ ಸಾಲಿಗೆ ಹೊಸಾ ಸೇರ್ಪಡೆಯಂತಿರೋ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ರಾಮಚಂದ್ರ ನಿರ್ದೇಶನ ಮಾಡಿರೋ ಈ ಚೊಚ್ಚಲ ಚಿತ್ರವೀಗ ಸಂಪೂರ್ಣವಾಗಿ ತಯಾರುಗೊಂಡು ಬಿಡುಗಡೆಯ ಹೊಸ್ತಿಲಲ್ಲಿದೆ. ತನ್ನ ವಿಭಿನ್ನ ಶೀರ್ಷಿಕೆ ಮತ್ತು ಅದಕ್ಕೆ ತಕ್ಕುದಾದ ಕಥೆಯ ಹೊಳಹಿನೊಂದಿಗೆ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಈ ಸಿನಿಮಾ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರಿನಲ್ಲಿ ಮೂಡಿ ಬಂದಿದೆ.
ವಸುಂಧರ ಕೃತಿಕ್ ಫಿಲಂಸ್ ಲಾಂಛನದಡಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರಿಗೆ ಮತ್ತೆರಡು ವಿಶೇಷ ಪಾತ್ರಗಳ ಮೂಲಕ ಮಯೂರಿ ಮತ್ತು ದುನಿಯಾ ರಶ್ಮಿ ಜೊತೆಯಾಗಿದ್ದಾರೆ. ಇದುವರೆಗೂ ಕನ್ನಡದಲ್ಲಿ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಒಂದಷ್ಟು ಕಥಾನಕಗಳು ಈಗಾಗಲೇ ಬಂದಿವೆ. ಆದರೆ ಇಂಥಾ ಕಂಟೆಂಟು ಹೊಂದಿರೋ, ಈ ಮಾದರಿಯ ಕಥಾನಕ ಇದುವರೆಗೂ ಬಂದಿರಲು ಸಾಧ್ಯವಿಲ್ಲ ಎಂಬ ಭರವಸೆ ಚಿತ್ರತಂಡದಲ್ಲಿದೆ.
ಈ ಚಿತ್ರ ಕೇವಲ ಕಂಟೆಂಟಿನ ಕಾರಣದಿಂದ ಮಾತ್ರವೇ ಭಿನ್ನವಾಗಿಲ್ಲ. ಬದಲಾಗಿ ತಾಂತ್ರಿಕತೆಯ ವಿಚಾರದಲ್ಲಿಯೂ ಉತ್ಕøಷ್ಟವಾಗಿ ಮೂಡಿ ಬಂದಿದೆಯಂತೆ. ಇಲ್ಲಿ ಗ್ರಾಫಿಕ್ಸ್ ಕೈಚಳಕ ಕೂಡಾ ಪ್ರಧಾನವಾಗಿ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದೆ. ಒಟ್ಟಾರೆಯಾಗಿ ಈ ಸಿನಿಮಾದಲ್ಲಿ ಮೂವತೈದು ನಿಮಿಷಗಳ ಕಣ್ಮನ ಸೆಳೆಯುವಂಥಾ ಗ್ರಾಫಿಕ್ಸ್ ವರ್ಕ್ ಮೂಡಿ ಬಂದಿದೆಯಂತೆ.

ಇದೂ ಸೇರಿದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿ ತಾಂತ್ರಿಕ ಕೈಚಳಕವೂ ಪ್ರಧಾನವಾಗಿಯೇ ಮೂಡಿ ಬಂದಿದೆ. ನಿರ್ದೇಶಕ ರಾಮಚಂದ್ರ ಮೊದಲ ಹೆಜ್ಜೆಯಲ್ಲಿಯೇ ಎಲ್ಲ ರೀತಿಯಿಂದಲೂ ರಿಚ್ ಆಗಿರುವಂತೆ ಈ ಚಿತ್ರವನ್ನು ರೂಪಿಸಿದ್ದಾರೆ. ಇದೆಲ್ಲವೂ ಶೀಘ್ರದಲ್ಲಿಯೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ