ತಪಸ್ಸಿನ ಫಲಕ್ಕೆ ನಾರಾಯಣ ಫುಲ್ ಖುಷ್..

ಶನಿವಾರ, 28 ಡಿಸೆಂಬರ್ 2019 (16:41 IST)
ಕಿರಿಕ್ ಪಾರ್ಟಿ ಸಿನೆಮಾದ ನಂತ್ರ ಎಲ್ಲೂ ಕಾಣದ ರಕ್ಷಿತ್ ಶೆಟ್ಟಿ ಎರಡ್ಮೂರು ವರ್ಷಗಳ ನಂತ್ರ ಕಂಡಿದ್ದೇ “ಅವನೇ ಶ್ರೀ ಮನ್ನಾರಾಯಣ” ಮೊದಲ ಟೀಸರ್ ನಲ್ಲಿ.ಅಂದಿನಿಂದ ಸಿಂಪಲ್ ಸ್ಟಾರ್ ಬಗ್ಗೆ ಸಾಕಷ್ಟು ದೊಡ್ಡ ನಿರೀಕ್ಷೆಗಳು ಹುಟ್ಟಿಕೊಳ್ತಾ ಹೋದ್ವು.
ಅದ್ರಲ್ಲೂ ರಕ್ಷಿತ್  ನಾರಾಯಣನ ಜಪ ಶುರುಮಾಡಿದಾಗಿನಿಂದ ಹೊಸ ಹೊಸ ನಿರೀಕ್ಷೆಗಳು ಬಿಲ್ಡ್ ಆದ್ವು. ಈ ನಿರೀಕ್ಷೆಗಳೇ 2-3 ವರ್ಷ ಕಾಯುವಂತೆ ಮಾಡಿದ್ವು.ಹೂಳಿಗೆಯ ಹೂರ್ಣ ಸಿದ್ದವಾದಂತೆ ಸವಿರುಚಿಯ ಸಿನೆಮಾ ಹೊರತರುವ ಯೋಜನೆಗಾಗಿ ಶ್ರಮ ಪಟ್ಟ ಚಿತ್ರತಂಡದಿಂದ ಬಿಗ್ ಬಜೆಟ್,ಪ್ಯಾನ್ ಇಂಡಿಯಾ,ಡಿಫ್ರೆಂಟ್ ಕಾನ್ಸೆಪ್ಟ್, ವಿಭಿನ್ನ ಶೈಲಿಯ ನಿರೂಪಣೆ, ದೊಡ್ಡ ದೊಡ್ಡ ಸೆಟ್,ಕಾಸ್ಟೂಮ್,ಹಿತವಾಗಿರೋ ಮ್ಯೂಸಿಕ್, ತಾರಾಬಳಗ ಹೀಗೆ ಹೊಸದೇನೋ  ಸೇರಿಕೊಂಡು ಕೊನೆಗೆ ಸಿಕ್ಕ ಪ್ರತಿಫಲವೇ ಇಂದಿನ ಸಕ್ಸಸ್ ಫುಲ್   “ಅವನೇ ಶ್ರೀ ಮನ್ನಾರಾಯಣ” ಸಿನೆಮಾ.
 
ಇದೊಂಥರಾ ಸವಾಲಾದ್ರೂ,ದೊಡ್ಡ ಪರೀಕ್ಷೆಗೆ ನಿಂತಿದ್ದ ರಕ್ಷಿತ್ ಶೆಟ್ಟಿಯ ಕನಸಿನ ಊಟವನ್ನ ಪ್ರೇಕ್ಷಕನಂತೂ ಎಂಜಾಯ್ ಮಾಡ್ತಾ ಸವಿದಿದ್ದಾನೆ.ಥ್ರಿಲ್ ಎನಿಸೋ ಚಿತ್ರದ ಪ್ರತೀ ದೃಶ್ಯವನ್ನೂ ಸೀಟಿನ ತುದಿಯಲ್ಲಿ ಕೂತು ನೋಡಿದ್ದಾನೆ.ಮಾಸ್ ಆಗಿ,ಬೇಕಾದಾಗ ಕಾಮಿಡಿ ಟಚ್ ಅನ್ನೂ ಕೊಟ್ಟು ಸಿಂಪಲ್ ಸ್ಟಾರ್ ಅನ್ನ ಚಾಲಾಕಿಯಾಗೇ ತೋರಿಸಿದ ನಿರ್ದೇಶಕ ಸಚಿನ್ ರನ್ನ ಸಿನಿಪ್ರಿಯ ಅಪ್ಪಿದ್ದಾನೆ.ಬರೀ ನಾಯಕನಲ್ಲದೇ,ನಟಿ ಶಾನ್ವಿ,ಅಚ್ಯುತ್,ಪ್ರಮೋದ್ ಹೀಗೆ ಇಡೀ ತಾರಾಬಳಗದ ಪ್ರಾಮುಖ್ಯತೆ ಕಥೆಯಲ್ಲಿ ಎದ್ದು ಕಾಣತ್ತೆ. ಚಿತ್ರದಲ್ಲಿ ನಮ್ಮನ್ನ ಹಿಡಿದಿಡೋ ಮ್ಯೂಸಿಕ್ ಗೆ ಸಂಗೀತ ನಿರ್ದೇಶಕರಿಗೊಂದು ಸಲಾಂ ಹೇಳ್ತಾ,ಫ್ರೇಮುಗಳನ್ನ ಅದ್ದೂರಿಯಾಗಿ ಶೃಂಗರಿಸಿದ್ದ ನಿರ್ಮಾಪಕ ಮಲ್ಲಿಕಾರ್ಜುನಯ್ಯ ಅವರ ಶ್ರಮ ಸಾಕಷ್ಟಿದೆ. 
ಜೊತೆಗೆ ಪ್ರತೀ ಸೀನಿಗೂ ಶಿಳ್ಳೆ ಚಪ್ಪಾಳೆ ಪಡೆದುಕೊಳ್ಳೋ ಸೀನ್ ಗಳ ಹಿಂದಿರೋ ತಂಡದ  2 ವರ್ಷದ ಶ್ರಮ ಎದ್ದು ಕಾಣತ್ತೆ.ಒಟ್ಟಾರೆ ಯಾಗಿ ಹೇಳೋದಾದ್ರೆ ಕ್ರೇಜ್ ಹುಟ್ಟು ಹಾಕಿದ್ದ ಹ್ಯಾಂಡ್ಸಪ್ ಸಾಂಗ್ ನ ಇದು ಚರಿತ್ರೆ ಸೃಷ್ಠಿಸೋ ಅವತಾರ ಸಾಲು ರಕ್ಷಿತ್ ಶೆಟ್ಟಿಯ ಹೊಸ ಅವತಾರದ ನಾಂದಿಗೆ ಸಿಕ್ರೇಟ್ ಲೈನ್ ಏನೋ ಅನಿಸುತ್ತೆ.ಒಟ್ನಲ್ಲಿ 3 ವರ್ಷದಿಂದ ನಾರಾಯಣನ ಜಪದಲ್ಲಿ ಮುಳುಗಿದ್ದ ರಕ್ಷಿತ್ ತೆರೆಮೇಲೆ ಅಭಿಮಾನಿಗಳ ನಿರೀಕ್ಷೆಯಂತೆ ಇಂದು ಪ್ರತ್ಯಕ್ಷವಾಗಿದ್ದು, ಪ್ರೇಕ್ಷಕರ ಶಿಳ್ಳೆ,ಚಪ್ಪಾಳೆ,ಖುಷಿ ಯ ಜೊತೆ ವಿಜಯೋತ್ಸವದ ಸಂಭ್ರಮಕ್ಕೆ ಕಾರಣವಾಗಿದ್ದು,ಸಿಂಪಲ್ ಸ್ಟಾರ್ ತಪಸ್ಸಿಗೆ ಫಲ ಸಿಕ್ಕಿ ಗೆದ್ದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ