ಪಲ್ಸ್ ಪೋಲಿಯೋ ನೆಪದಲ್ಲಿ ಬೇಬಿ ಚಿರು ಮುಖದರ್ಶನವಾಯ್ತು

ಸೋಮವಾರ, 1 ಫೆಬ್ರವರಿ 2021 (09:16 IST)
ಬೆಂಗಳೂರು: ನಟಿ ಮೇಘನಾ ರಾಜ್-ಚಿರಂಜೀವಿ ಸರ್ಜಾ ಮುದ್ದಿನ ಮಗನ ಮುಖ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಆಸೆ ಪೂರೈಸಿದೆ.
Photo Courtesy: Meghana Raj instagram


ಬೇಬಿ ಚಿರು ಇದೇ ಮೊದಲ ಬಾರಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡಿದ್ದಾನೆ. ಈ ಫೋಟೋಗಳನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವೇಳೆ ಬೇಬಿ ಚಿರು ಮುಖ ಸ್ವಲ್ಪ ಮಟ್ಟಿಗೆ ಬಹಿರಂಗವಾಗಿದೆ. ಹುಟ್ಟಿದಾಕ್ಷಣ ಮಾಧ್ಯಮಗಳ ಎದುರು ಮಗುವಿನ ಮುಖ ತೋರಿಸಿದ್ದರ ಹೊರತಾಗಿ ಮೇಘನಾ ಕುಟಂಬಸ್ಥರು ಇದುವರೆಗೆ ಮಗುವಿನ ಫೋಟೋಗಳನ್ನು ರಿವೀಲ್ ಮಾಡಿಲ್ಲ. ಅವರ ಮಗುವೆಂದು ಹಲವು ನಕಲಿ ಫೋಟೋಗಳು ಓಡಾಡುತ್ತಿದ್ದವು. ಆದರೆ ಈಗ ಮೇಘನಾ ಲಸಿಕೆ ಹಾಕಿಸುವ ಫೋಟೋ ಪ್ರಕಟಿಸುವಾಗ ಬೇಬಿ ಚಿರು ಮುಖದರ್ಶನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ