ಆದರೆ ಈ ವಿಚಾರಕ್ಕೆ ಮನೆಯವರು ಅಸಮಾಧಾಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಚೈತ್ರಾ ಕುಂದಾಪುರ ಈ ವಿಚಾರವಾಗಿ ಮನೆಯವರೊಂದಿಗೆ ಮಾತನಾಡಿದ್ದು, ಕಿಚ್ಚ ಸುದೀಪ್ ಮಾತನಾಡಿರುವುದನ್ನು ಸರಿಯಲ್ಲ ಎಂದಿದ್ದಾರೆ. ಕಿಚ್ಚ ಸುದೀಪ್ ಈ ವಾರ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿರುವುದರಿಂದ ಲಾಯರ್ ಜಗದೀಶ್ ಮಾಡಿದ್ದು ಸರಿ ಎಂಬ ಅರ್ಥ ಮೂಡುವಂತೆ ಮಾಡಿದೆ. ಇದು ಇತರೆ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದರ ಬಗ್ಗೆ ಚೈತ್ರಾ ಕುಂದಾಪುರ ಖಂಡಿಸಿದ್ದಾರೆ. ನೀನು ನನಗೆ ಕೆಸರು ಎರಚಿದರೆ ನಾನೂ ಕೆಸರನ್ನೇ ಎರಚೋದು. ಆ ವ್ಯಕ್ತಿ ಬಗ್ಗೆ ನನಗೇಕೆ ಅಷ್ಟು ಕ್ಲಾರಿಟಿ ಕೊಡ್ತಾರೆ? ಸ್ಪರ್ಧಿಗಳಿಗೆ ಸುದೀಪ್ ಬೈದರು ಅನ್ನೋದನ್ನಷ್ಟೇ ಜನ ನೆನಪಿಟ್ಕೊಳ್ತಾರೆ. ಆದರೆ ಮಧ್ಯೆ ಹೇಳಿದ ಕೆಲವು ಲೈನ್ ಗಳನ್ನು ಜನ ನೆನಪಿಟ್ಟುಕೊಳ್ಳಲ್ಲ ಎಂದಿದ್ದಾರೆ. ಮನೆಯವರೆಲ್ಲರಿಗೂ ಕಿಚ್ಚ ಸುದೀಪ್ ಈ ವಾರ ಜಗದೀಶ್ ವಿಚಾರದಲ್ಲಿ ತಮಗೆ ಕ್ಲಾಸ್ ತೆಗೆದುಕೊಂಡಿದ್ದು ಸ್ವಲ್ಪವೂ ಇಷ್ಟವಾಗಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.