ಆದರೆ ಈ ವಾರ ಮತ್ತೆ ಅವರ ಕಿರಿಕ್ ಶುರುವಾಗಿದೆ. ಬಿಗ್ ಬಾಸ್ ನ್ನೇ ಏಕವಚನದಲ್ಲಿ ನಿಂದಿಸಿದ್ದರು. ಕೊನೆಗೆ ಅವರನ್ನು ಕನ್ ಫೆಷನ್ ರೂಂಗೆ ಕರೆದೊಯ್ದು ಬಿಗ್ ಬಾಸ್ ಮಾತನಾಡಿಸಿದ್ದರು. ಇದರ ನಡುವೆ ರಂಜಿತ್ ಮನೆಯ ಇತರೆ ಸದಸ್ಯರ ಜೊತೆ ಇನ್ನು ಮುಂದೆ ಏನಾದ್ರೂ ಅವರು ಸುಖಾ ಸುಮ್ಮನೇ ಕಿರಿಕ್ ಮಾಡಿಕೊಂಡು ಬಂದರೆ ನನ್ನ ಕೈಯಲ್ಲಿ ತಿಂತಾರೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು.