BBK11: ಮೋಕ್ಷಿತಾ ಪೈ ಮಗುವಿನ ಕಿಡ್ನ್ಯಾಪ್ ಮಾಡಿದ್ದರಾ, ವೈರಲ್ ಆಗುತ್ತಿದೆ ಹಳೆಯ ನ್ಯೂಸ್

Krishnaveni K

ಗುರುವಾರ, 12 ಡಿಸೆಂಬರ್ 2024 (10:08 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿರುವ ಮೋಕ್ಷಿತಾ ಪೈ ವಿರುದ್ಧ ಈಗ ಹಳೆಯ ಕಿಡ್ನ್ಯಾಪ್ ವಿಚಾರವೊಂದು ಬೆಳಕಿಗೆ ಬಂದಿದೆ. ಆಗ ಐಶ್ವರ್ಯಾ ಪೈ ಎಂದು ಹೆಸರು ಹೊಂದಿದ್ದ ಮೋಕ್ಷಿತಾ ಪ್ರಿಯಕರ ನಾಗಭೂಷಣ್ ಜೊತೆ ಸೇರಿಕೊಂಡು ತನ್ನ ಬಳಿ ಟ್ಯೂಷನ್ ಹೇಳಿಸಿಕೊಳ್ಳಲು ಬರುತ್ತಿದ್ದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದರು ಎಂಬ ಆರೋಪವಿದೆ.

ಇದೀಗ ಬಿಗ್ ಬಾಸ್ ನಲ್ಲಿ ಸದ್ದು ಮಾಡುತ್ತಿರುವ ಮೋಕ್ಷಿತಾ ಪೈ ಅವರ ಹಳೆಯ ಕತೆಯೊಂದು ಈಗ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಪ್ರಕರಣದಲ್ಲಿ ಮೋಕ್ಷಿತಾ ಅಲಿಯಾಸ್ ಐಶ್ವರ್ಯಾ ಪೈ ಅರೆಸ್ಟ್ ಆಗಿದ್ದರು. ಪ್ರಿಯಕರ ನಾಗಭೂಷಣ್ ಜೊತೆ ಸೇರಿಕೊಂಡು ತನ್ನ ಮನೆಗೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ 14 ವರ್ಷದ ಪವಿತ್ರಾಳನ್ನು ಕಿಡ್ನ್ಯಾಪ್ ಮಾಡಿದ್ದರು. ರಾಜಾಜಿನಗರದಲ್ಲಿ ಈ ಘಟನೆ ನಡೆದಿತ್ತು.

ಪ್ರತೀ ದಿನ ಮೋಕ್ಷಿತಾ ಜೊತೆ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಪವಿತ್ರಾಳನ್ನು ನಾಗಭೂಷಣ್ ಜೊತೆ ಸೇರಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಬಿಎ ಮಾಡಿ ಶ್ರೀನಗರದಲ್ಲಿ ಕೆಲಸ ಮಾಡಿಕೊಂಡಿದ್ದಾಗ ನಾಗಭೂಷಣ್ ಪರಿಚಯವಾಗಿತ್ತು. ಪವಿತ್ರಾ ಪೋಷಕರ ಜೊತೆಗೆ ಐಶ್ವರ್ಯಾಗೆ ಉತ್ತಮ ಸಂಬಂಧವಿತ್ತು.

ಆದರೆ ಹಣದ ಆಸೆಗೆ ಕಿಡ್ನ್ಯಾಪ್ ಮಾಡಿ 25 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಪವಿತ್ರಾ ಪೋಷಕರಾದ ಸುರೇಶ್ ಮತ್ತು ರತ್ನಮ್ಮ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಐಶ್ವರ್ಯಾ-ನಾಗಭೂಷಣ್ ಸಿಕ್ಕಿಬಿದ್ದಿದ್ದರು ಎಂದು ಹಳೆಯ ವರದಿಯೊಂದು ವೈರಲ್ ಆಗಿದೆ. ಬಿಗ್ ಬಾಸ್ ಗೆ ಬರುವುದಕ್ಕಿಂತ ಮೊದಲು ಪಾರು ಧಾರವಾಹಿಯ ನಾಯಕಿಯಾಗಿದ್ದ ಮೋಕ್ಷಿತಾ ಮನೆ ಮಾತಾಗಿದ್ದರು. ಆದರೆ ಅದಕ್ಕೂ ಮೊದಲಿನ ಈ ಘಟನೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಈ ಹಿಂದೆ ವರದಿಯಾಗಿತ್ತು. ಆ ಸುದ್ದಿ ಈಗ ವೈರಲ್ ಆಗುತ್ತಿದೆ. ಇದರ ಸತ್ಯಾಸತ್ಯತೆ ಬಗ್ಗೆ ಮೋಕ್ಷಿತ ಅವರೇ ಉತ್ತರಿಸಬೇಕಷ್ಟೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ