ಪರಭಾಷೆಗೆ ’ಬ್ಯೂಟಿಫುಲ್ ಮನಸುಗಳು’ ಪಯಣ

ಮಂಗಳವಾರ, 14 ಫೆಬ್ರವರಿ 2017 (21:21 IST)
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‍ವುಡ್ ಚಿತ್ರಗಳು ಪರಭಾಷೆಯ ಗಮನಸೆಳೆಯುತ್ತಿರುವುದು ಗೊತ್ತೇ ಇದೆ. ಇದೀಗ ಅದೇ ಸಾಲಿಗೆ ಬ್ಯೂಟಿಫುಲ್ ಮನಸುಗಳು ಹೊಸ ಸೇರ್ಪಡೆ ಎನ್ನಬಹುದು. ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ.
 
ಇದೀಗ ಈ ಚಿತ್ರ ತೆಲುಗು ಮತ್ತು ಮರಾಠಿಗೆ ರೀಮೇಕ್ ಆಗುತ್ತಿದೆ. ಆರಂಭದಲ್ಲಿ ಕೇವಲ ಮರಾಠಿಗೆ ಮಾತ್ರ ರೀಮೇಕ್ ಆಗುತ್ತದೆ ಎಂದುಕೊಂಡಿದ್ದೆವು. ಆದರೆ ತೆಲುಗು ಚಿತ್ರೋದ್ಯಮವೂ ರೀಮೇಕ್ ಮಾಡಲು ಮುಂದಾಗಿದೆ ಎಂದು ಚಿತ್ರದ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ.
 
ಚಿತ್ರರಸಿಕರ ಗಮನಸೆಳೆದಿರುವ ಈ ಚಿತ್ರ ಬಾಕ್ಸ್ ಆಫೀಸಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿದೆ. ಚಿತ್ರವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾದ ಸಿನಿಮಾ. "2012ರಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದು ತೆರೆಗೆ ತಂದಿರುವ ಚಿತ್ರ. ಈ ಕಥೆಯಲ್ಲಿ ಪ್ರೀತಿ, ಕ್ರೌರ್ಯ, ಜೀವನ ಪ್ರೀತಿ ... ಎಲ್ಲವೂ ಇರುವ ಚಿತ್ರ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ