ತಂದೆಗೆ ಹೃದಯಾಘಾತವಾದಗ ಚಿತ್ರತಂಡ ನಡೆಸಿಕೊಂಡ ರೀತಿ ಬಗ್ಗೆ ಪುತ್ರ ಭರತ್ ತಾಳಿಕೋಟೆ ಏನಂದ್ರು

Sampriya

ಸೋಮವಾರ, 13 ಅಕ್ಟೋಬರ್ 2025 (20:49 IST)
Photo Credit X
ಉಡುಪಿ: ಹೃದಯಾಘಾತಕ್ಕೊಳಗಾದ ನಮ್ಮ ತಂದೆಯನ್ನು ಉಳಿಸಿಕೊಳ್ಳಲು ಚಿತ್ರತಂಡ ಬಹಳ ಪ್ರಯತ್ನಪಟ್ಟಿತ್ತು ಎಂದು ಮೃತ ರಾಜು ತಾಳಿಕೋಟೆ ಪುತ್ರ ಭರತ್ ಅವರು ಪ್ರತಿಕ್ರಿಯಿಸಿದ್ದಾರೆ. 

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಶೈನ್ ಶೆಟ್ಟಿ ಅಭಿನಯದ ಮುಂದಿನ ಸಿನಿಮಾದ ಶೂಟಿಂಗ್‌ಗಾಗಿ ಹೆಬ್ರಿಗೆ ಬಂದಿದ್ದರು. ಅವರಿಗೆ ಈ ಹಿಂದೆ ಹೃದಯಾಘಾತವಾಗಿತ್ತು. ಆ ಸಂದರ್ಭದಲ್ಲಿ ಅವರದನ್ನು ಬೆಂಗಳೂರಿನ ಜಯದೇವದಲ್ಲಿ ಚಿಕಿತ್ಸೆಕೊಡಿಸಿದ್ದೆವು. ನಿನ್ನೆ ರಾತ್ರಿ ಎರಡನೇ ಬಾರಿಗೆ ತೀವ್ರ ಹೃದಯಘಾತವಾಗಿತ್ತು. ತಂದೆಯವರನ್ನು ಉಳಿಸಲು ಚಿತ್ರತಂಡ ಬಹಳ ಪ್ರಯತ್ನಪಟ್ಟಿತ್ತು ಎಂದು ತಿಳಿಸಿದರು.

35 ವರ್ಷದಿಂದ ಉತ್ತರ ಕರ್ನಾಟಕದಲ್ಲಿ ನಾಟಕ ರಂಗದಲ್ಲಿ ತಮ್ಮ ಕಲಾಸೇವೆಯನ್ನು ಮಾಡಿದ್ದರು, ಕರ್ನಾಟಕ ಸರ್ಕಾ ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. 
ಇಂದು ಮೃತದೇಹವನ್ನು ಧಾರವಾಡ ರಂಗಾಯಣಕ್ಕೆ ತಗೆದುಕೊಂಡು ಹೋಗುತ್ತೇವೆ. ಅಲ್ಲಿ ಮೃತದೇಹ ಅಭಿಮಾನಿಗಳು ಗೌರವ ಸಲ್ಲಿಸುತ್ತಾರೆ. ನಂತರ ಅವರ ಇಷ್ಟಪಡುವ ಸ್ಥಳವಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕು ಚಿಕ್ಕಸಿಂಧಗಿಯಲ್ಲಿರುವ ತೋಟದ ಮನೆಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಹೇಳಿದರು. 

ತಂದೆಯವರು ಹೆಚ್ಚಾಗಿ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲೇ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ ಅವರ ಪ್ರೀತಿಸುವವರು ಅಭಿಮಾನಿಗಳು ಸಂಬಂಧಿಕರು ಚಿಕ್ಕ ಸಿಂಧಗಿಗೆ ಬನ್ನಿ ಎಂದು ಮನವಿ ಮಾಡಿದರು.

ನಮ್ಮ ತಂದೆಯವರಿಗೆ ಎರಡು ಮದುವೆಯಾಗಿತ್ತು. ಇಬ್ಬರು ಗಂಡು ಮೂರು ಹೆಣ್ಣು ಮಕ್ಕಳಿದ್ದರು. 5 ಮಕ್ಕಳು ಬಹಳ ಅನ್ಯೋನ್ಯವಾಗಿದ್ದೇವೆ. ಕಲಿಯುಗದ ಕುಡುಕ ಅವರಿಗೆ ಬಹಳ ಹೆಸರು ತಂದ ನಾಟಕವಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ