ಇದು ಸಾವಲ್ಲ ನಿಮ್ಮ ಹುಟ್ಟು: ರಾಜು ತಾಳಿಕೋಟೆ ನಿಧನಕ್ಕೆ ಯೋಗರಾಜ್ ಭಟ್ ಕಂಬನಿ

Sampriya

ಸೋಮವಾರ, 13 ಅಕ್ಟೋಬರ್ 2025 (20:14 IST)
Photo Credit X
ಬೆಂಗಳೂರು: ರಂಗಭೂಮಿ ಕಲಾವಿದ, ಕನ್ನಡದ ಹಾಸ್ಯನಟ ರಾಜು ತಾಳಿಕೋಟೆ ಅವರ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ ಅವರು ಕಂಬನಿ ಮಿಡಿದಿದ್ದಾರೆ. 

ತಾಳಿಕೋಟೆ ನಿಧನಕ್ಕೆ ಕಂಬನಿ ಮಿಡಿದ ಯೋಗರಾಜ್ ಭಟ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.  ನಮಸ್ತೆ, ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬಾ ಪ್ರೀತಿ, ತುಂಬಾ ಖುಷಿ, ತುಂಬಾ ನೆನಪು. ನೀವೊಬ್ಬ ನಾಡುಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ, ಇದು ಸಾವಲ್ಲ ನಿಮ್ಮ ಹುಟ್ಟು. ನಮನ + ಧನ್ಯವಾದ ರಾಜಣ್ಣ ಎಂದು ಬರೆದುಕೊಂಡಿದ್ದಾರೆ.

ತಾಳಿಕೋಟೆ ಅವರು ನಟ ಶೈನ್ ಶೆಟ್ಟಿ ಅಭಿನಯದ ಸಿನಿಮಾದಲ್ಲಿ ಅಭಿನಯಿಸಲೆಂದು ಉಡುಪಿಯಲ್ಲಿದ್ದರು. ಈ ಸಂದರ್ಭದಲ್ಲಿಅ ವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆದರೆ ಚಿಕಿತ್ಸೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ