ದರ್ಶನ್ ಬೆಡ್ ಹತ್ತುವ ಮೊದಲು ಯೋಚನೆ ಮಾಡ್ಬೇಕಿತ್ತು: ಡಿ ಬಾಸ್ ಫ್ಯಾನ್ಸ್ ಕೆರಳಿಸಿ ಮಹಿಳೆಯ ವಿಡಿಯೋ

Krishnaveni K

ಸೋಮವಾರ, 13 ಅಕ್ಟೋಬರ್ 2025 (15:41 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಕುರಿತು ಮಹಿಳೆಯೊಬ್ಬರು ಆಡಿರುವ ಮಾತು ಈಗ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಆಕೆಯ ವಿಡಿಯೋ ವೈರಲ್ ಆಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ಈಗ ಹಾಸಿಗೆ, ದಿಂಬು ಒದಗಿಸುವಂತೆ ಜೈಲು ಅಧಿಕಾರಿಗಳು ಮತ್ತು ನ್ಯಾಯಾಲಯದ ಮುಂದೆ ಹೋರಾಟವನ್ನೇ ಮಾಡುತ್ತಿದ್ದಾರೆ. ಇದರ ಬಗ್ಗೆ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ವ್ಯಂಗ್ಯ ಮಾಡಿದ್ದಾರೆ.

‘ಏನು ದರ್ಶನ್ ಗೆ ಹಾಸಿಗೆ ಸಿಕ್ತಿಲ್ವಾ? ಆಚೆ ಇರೋವಾಗ ಯಾರ ಜೊತೆ ಬೆಡ್ ಹತ್ತಬೇಕು, ಬೇಡ ಎಂದು ಯೋಚಿಸ್ಬೇಕಿತ್ತು. ಆಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೂ ಆಯುರ್ವೇದದ ಪ್ರಕಾರ ಫ್ಲ್ಯಾಟ್ ಇರೋ ನೆಲದ ಮೇಲೆ ತಲೆದಿಂಬೂ ಇಲ್ಲದೇ ಮಲಗಿದ್ರೆ ಬೆನ್ನು ನೋವಿಗೆ ತುಂಬಾ ಒಳ್ಳೆಯದಂತೆ. ಒಟ್ಟಿನಲ್ಲಿ ಬೆನ್ನು ನೋವು ವಾಸಿಯಾಗಬೇಕು ಅಣ್ಣಂಗೆ’ ಎಂದು ಮಹಿಳೆ ಜ್ಯೂಸ್ ಹೀರುತ್ತಾ ವ್ಯಂಗ್ಯವಾಗಿ ಹೇಳಿದ್ದಾಳೆ.

ಆಕೆಯ ವಿಡಿಯೋಗೆ ಸಾಕಷ್ಟು ಜನ ಡಿಬಾಸ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ನೀವು ಖಾಲಿ ಜ್ಯೂಸ್ ಬಾಟಲಿ ಹಿಡ್ಕೊಂಡು ಪೋಸ್ ಕೊಡೋದನ್ನು ಬಿಡಿ ಎಂದಿದ್ದಾರೆ. ಹೆಣ್ಣು ಮಗು ಎನ್ನುವ ಕಾರಣಕ್ಕೆ ಬೈಯದೇ ಸುಮ್ನಿದ್ದೀವಿ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಫೇಮಸ್ ಆಗಬೇಕು ಎಂದು ಅವರ ಹೆಸರು ಹೇಳಿಕೊಂಡು ರೀಲ್ಸ್ ಮಾಡ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ.


 
 
 
 
View this post on Instagram
 
 
 
 
 
 
 
 
 
 
 

A post shared by Movie Magic (@movie_magicnews)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ