ಬೆಂಗಳೂರು: ಜೀ ಕನ್ನಡದಲ್ಲಿ ಇದೀಗ ಶುರುವಾಗುತ್ತಿರುವ ಹೊಸ ಸೀರಿಯಲ್‌ಗೆ ನಾಯಕಿಯಾಗಿ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಆಯ್ಕೆಯಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಕನ್ನಡತಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ಕಿರಣ್ ರಾಜ್ ಅವರು ಇದೀಗ ಜೀ ಕನ್ನಡದ ಕರ್ಣ ಸೀರಿಯಲ್ ಮೂಲಕ ಮತ್ತೇ ಕಿರುತೆರೆಗೆ ವಾಪಾಸ್ಸಾಗಿದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಇದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಕಲರ್ಸ್ ಕನ್ನಡದ ಗೀತಾ ಸೀರಿಯಲ್ ಮೂಲಕ ಮೆಚ್ಚುಗೆ ಗಳಿಸಿದ ಭವ್ಯಾ ಗೌಡ ಅವರು ಇದೀಗ ಕರ್ಣ ಸೀರಿಯಲ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಕರ್ಣ ಧಾರಾವಾಹಿಗೆ ಇವರೇ ನಾಯಕಿ ಎಂದು ವರದಿ ಆಗಿದೆ. ಈ ಧಾರಾವಾಹಿ ಸಂದರ್ಭದ ಶೂಟಿಂಗ್ ವಿಡಿಯೋಗಳು ಎಲ್ಲ ಕಡೆಗಳಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
ಇದರಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿರುವುದು ಇದೆ. ಇನ್ಸ್ಟಾಗ್ರಾಮ್ ರಿಲ್ಸ್ನಲ್ಲಿ ವಿಡಿಯೋ ಹರಿದಾಡುತ್ತಿದೆ.