BOYS vs GIRLS: ಟಾಸ್ಕ್ ಮಾಸ್ಟರ್ ಭವ್ಯಾ ಎಲ್ಲಿ ಎಂದ ಅಭಿಮಾನಿಗಳು

Sampriya

ಗುರುವಾರ, 30 ಜನವರಿ 2025 (15:37 IST)
Photo Courtesy X
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಾಯ್ಸ್‌ ವರ್ಸಸ್ ಗರ್ಲ್ಸ್‌ ಶೋ ಆರಂಭವಾಗಲೂ ಕೇವಲ ಎರಡು ದಿನ ಬಾಕಿಯಿದೆ. ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಹೊಸ ರಿಯಾಲಿಟಿ ಶೋ ಬಗ್ಗೆ ನಿರೂಪಕಿ ಅನುಪಮಾ ಗೌಡ ಅವರು ಬಂದು ಅನೌನ್ಸ್ ಮಾಡಿದ್ದರು.

ಇದೀಗ ಬಾಯ್ಸ್‌ ತಂಡದ ನಾಯಕನಾಗಿ ಬಿಗ್‌ಬಾಸ್ ಮನೆಯಲ್ಲಿ ಆನೆ ಎಂದೇ ಖ್ಯಾತಿ ಗಳಿಸಿದ ವಿನಯ್ ಗೌಡ ಹಾಗೂ ಗರ್ಲ್ಸ್‌ ತಂಡದ ನಾಯಕಿಯಾಗಿ ನಟಿ ಶುಭ ಪೂಂಜಾ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.

ಈ ಶೋನಲ್ಲಿ ಅನೇಕ ಕನ್ನಡ ರಿಯಾಲಿಟಿ ಶೋನ ಖ್ಯಾತರು ಭಾಗವಹಿಸುತ್ತಿದ್ದಾರೆ.  ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.

ಇದನ್ನು ನೋಡಿದ ಭವ್ಯಾ ಅಭಿಮಾನಿಗಳು ಟಾಸ್ಕ್ ಮಾಸ್ಟರ್ ಭವ್ಯಾ ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ಮೂಲಕನೇ ಹೆಚ್ಚು ಗುರುತಿಸಿಕೊಂಡಿದ್ದ ಭವ್ಯಾ ಅವರು ಬರಲಿ ಎಂದು ಬೇಡಿಕೆಯಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ