Chaithra Kundapura wedding: ತಾಳಿ ಕಟ್ಟಿಸುವಾಗ ಮಂತ್ರ ಹೇಳಿದ ಚೈತ್ರಾ ಕುಂದಾಪುರ video

Krishnaveni K

ಶುಕ್ರವಾರ, 9 ಮೇ 2025 (12:41 IST)
Photo Credit: Instagram
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಇಂದು ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಅಳುತ್ತಾ, ಮಂತ್ರ ಹೇಳುತ್ತಲೇ ಪತಿ ಕೈಯಲ್ಲಿ ಚೈತ್ರಾ ತಾಳಿ ಕಟ್ಟಿಸಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಹಿಂದೂ ಕಾರ್ಯಕರ್ತೆಯಾಗಿ ಹೆಸರು ಪಡೆದವರು. ಬಳಿಕ ಬಿಜೆಪಿ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಜೈಲಿಗೂ ಹೋಗಿ ಬಂದವರು. ನೇರಾನೇರ ಮಾತುಗಳಿಂದಲೇ ಜನರ ಗಮನಸೆಳೆದವರು.

ಇಂದು ಚೈತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನಿಮೇಷನ್ ಓದಿರುವ ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ಚೈತ್ರಾ ಮದುವೆಯಾಗಿದ್ದಾರೆ. ಈ ಮೂಲಕ ಬಹಳ ದಿನಗಳ ತಮ್ಮಿಬ್ಬರ ಮದುವೆಗೆ ದಾಂಪತ್ಯದ ಮುದ್ರೆಯೊತ್ತಿದ್ದಾರೆ.

ತಾಳಿ ಕಟ್ಟಿಸುವಾಗ ಚೈತ್ರಾ ಭಾವುಕರಾಗಿದ್ದು, ತಾವೇ ಮಂತ್ರ ಪಠಿಸಿದ್ದಾರೆ. ಈ ಮದುವೆಗೆ ಬಿಗ್ ಬಾಸ್ ಖ್ಯಾತಿ ರಜತ್ ಸೇರಿದಂತೆ ಅವರ ಆಪ್ತರು ಬಂದು ಹಾರೈಸಿದ್ದಾರೆ.


 
 
 
 
View this post on Instagram
 
 
 
 
 
 
 
 
 
 
 

A post shared by Media King (@thenameismediaking)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ