ಬಿಗ್‌ಬಾಸ್ ಸೀಸನ್ 11 ಭಾರೀ ಕುತೂಹಲದೊಂದಿಗೆ ಶುರುವಾದ ಶೋನಲ್ಲಿ ಮೊದಲ ದಿನವೇ ಜಗಳ, ಮುನಿಸು ಆರಂಭಗೊಂಡಿದೆ. ಕೆಲ ವಿಚಾರಗಳಿಗೆ ಸ್ವರ್ಗ ನಿವಾಸಿ ಹಾಗೂ ನರಕ ನಿವಾಸಗಳ ಮಧ್ಯೆ ಕಿತ್ತಾಟವು ಜೋರಾಗಿಯೇ ನಡೆಯುತ್ತಿದೆ.
ನರಕ ನಿವಾಸಿ ಹಾಗೂ ಸ್ವರ್ಗ ನಿವಾಸಿಗಳ ಮಧ್ಯೆ ಮಾತಿನ ಜಟಾಪಟಿ ಜೋರಾಗಿದ್ದು, ವೀಕ್ಷಕರು ಯಾಕೆ ಹೀಗೆ ಕಿತ್ತಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಹೀಗೇ ಆಟವಾಡುತ್ತಿದ್ದಾರೆ ಎಂದು ಬಿಗ್‌ಬಾಸ್ ಪ್ರಿಯರು ಕಮೆಂಟ್ ಮಾಡುತ್ತಿದ್ದಾರೆ.
ಲಾಯರ್ ಜಗದೀಶ್- ಧನರಾಜ್, ಭವ್ಯಾ- ನರಕ ನಿವಾಸಿಗಳು, ಮಂಜು- ಜಗದೀಶ್, ಚೈತ್ರಾ-ಸ್ವರ್ಗ ನಿವಾಸಿಗಳ ನಡುವಿನ ಮಾತಿನ ಚಕಮಕಿಯಲ್ಲಿ ಸ್ವರ್ಗ ನಿವಾಸಿಯಾಗಿರುವ ಗೌತಮಿ ಜಾಧವ್ ಹಾಗೂ ನರಕ ನಿವಾಸಿಯಾಗಿರುವ ಮೋಕ್ಷಿತಾ ಪೈ ಅವರ ಮೌನ ವೀಕ್ಷಕರ ಗಮನ ಸೆಳೆಯುತ್ತಿದೆ.
ಮೋಕ್ಷಿತಾ ಪೈ ಹಾಗೂ ಗೌತಮಿ ಅವರು ತುಂಬಾನೇ ಸಿಂಪಲ್ ಆಗಿ, ಯಾವುದೇ ಬಿಲ್ಡಪ್ ಇಲ್ಲದೆ ಸಹಸ್ಪರ್ಧಿಗಳ ಜತೆ ಬೆರೆಯುತ್ತಿದ್ದಾರೆ.
ಅವಶ್ಯಕತೆಯಿದ್ದಾಗಷ್ಟೇ ತಮ್ಮ ಧ್ವನಿಯನ್ನು ಏರಿಸುತ್ತಿರುವ ಇವರ ವ್ಯಕ್ತಿತ್ವಕ್ಕೆ ಬಿಗ್‌ಬಾಸ್ ಪ್ರಿಯರು ಫಿದಾ ಆಗಿದ್ದಾರೆ. ಇನ್ನೂ ಮೋಕ್ಷಿತಾ ಅವರು ಅಂದ., ಚೆಂದ ಮತ್ತು ಗುಣಗಳಾ ಬಗ್ಗೆ ಮೆಚ್ಚಿಕೊಂಡಿರುವ ಹುಡುಗರು ನಮ್ಮ ಹೊಸ ಕ್ರಶ್ ಎನ್ನುತ್ತಿದ್ದಾರೆ.