BigBoss Season11: ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಲವ್‌ ಸ್ಟೋರಿ

Sampriya

ಬುಧವಾರ, 2 ಅಕ್ಟೋಬರ್ 2024 (19:41 IST)
Photo Courtesy X
ಬಿಗ್‌ಬಾಸ್ ಸೀಸನ್ 11 ಶುರುವಾಗಿ ಮೂರು ದಿನ ಕಳೆದಿದ್ದು, ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಸ್ವರ್ಗ ಮತ್ತು ನರಕ ನಿವಾಸಿಗಳ ಮಧ್ಯೆ ಜಗಳವು ವಿಪರೀತಕ್ಕೆ ಹೋಗಿದೆ. ಅದರ ಮಧ್ಯೆ ಹೊಸ ಜೋಡಿ ಸೃಷ್ಟಿ ಆಗೋ ಲಕ್ಷಣ ಕಾಣುತ್ತಿದೆ. ಸ್ವರ್ಗದ ಹುಡುಗಿ ಹಾಗೂ ನರಕದ ಹುಡುಗನಿಗೆ ಲವ್ ಶುರುವಾಯ್ತು ಎಂದು ಸಹ ಸ್ಪರ್ಧಿಗಳು ತಮಾಷೆ ಮಾಡುತ್ತಿದ್ದಾರೆ.

ಹೌದು ಸ್ವರ್ಗ ನಿವಾಸಿ ಐಶ್ವರ್ಯ ಅವರು ರಂಜಿತ್ ಅವರನ್ನು ಕೇರ್ ಮಾಡುವ ರೀತಿ ನೋಡಿ  ನರಕ ನಿವಾಸಿಗಳು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿ ಇಬ್ಬರು ನಾಚಿ ನೀರಾಗಿದ್ದಾರೆ.  ಐಶ್ವರ್ಯಾ ಬ್ಯೂಟಿಯನ್ನು ನರಕ ನಿವಾಸಿಗಳು ಕೊಂಡಾಡಿದ್ದಾರೆ. ವೈಟ್ ಸೀರೆಯಲ್ಲಿ ಚೆನ್ನಾಗಿ ಕಾಣ್ತಿದ್ದೀರಾ ಎಂದು ಚೈತ್ರಾ ಹೇಳಿದ್ರು. ಏನ್ ಈ ರೀತಿ ನೋಡ್ತಿದ್ದೀರಾ ಎಂದು ರಂಜಿತ್ ಅವರನ್ನು ಐಶ್ವರ್ಯಾ ಕೇಳಿದ್ದಾರೆ.  

ಪ್ಲೇಟ್​ನಲ್ಲಿರುವ ಊಟ ಬೇಕಾ? ನಾನ್ ಬೇಕಾ ಎಂದು ರಂಜಿತ್​ಗೆ ಐಶ್ವರ್ಯಾ ಕೇಳಿದ್ದಾರೆ. ಹೀಗೆಲ್ಲಾ ಕೇಳ್ಬೇಡಿ ಎಂದ ರಂಜಿತ್ ನನಗೆ ನೀವೇ ಬೇಕು ಅಂತಿದ್ದಾರೆ. ಇಬ್ಬರ ಮಾತುಗಳನ್ನು ಕೇಳಿದ ಸ್ಪರ್ಧಿಗಳು ಏನೋ ನಡೀತಿದೆ ಎಂದು ಇಬ್ಬರ ಕಾಲು ಎಳೆದಿದ್ದಾರೆ. ಶೋ ನೋಡಿದ ಜನ ಇಬ್ಬರ ನಡುವೆ ಲವ್​ ಶುರುವಾಗೋದು ಪಕ್ಕಾ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ