ಕಲರ್ಸ್ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಬಿಗ್‌ಬಾಸ್‌ಗೆ ಅವಾಜ್ ಹಾಕಿದ ವಕೀಲ ಜಗದೀಶ್ ಅವರು ನಕಲಿ ಲಾಯರ್ ಅಂತೆ. ಈ ಸಂಬಂಧ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು ಎಂಬ ವಿಚಾರ ಬಹಿರಂಗವಾಗಿದೆ. ಈ ವಿಚಾರವನ್ನು ಇದೀಗ ಜಗದೀಶ್ ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ದೊಡ್ಮನೆ ಸೇರಿರುವ ಜಗದೀಶ್ ಅವರು ಮೂರನೇ ದಿನದಲ್ಲೇ ಮನೆಯಿಂದ ಹೊರ ನಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ, ಬಿಗ್ ಬಾಸ್ ವಿರುದ್ಧ ತಮ್ಮದೇ ಮಾತಿನ ದಾಟಿ ಗುಡುಗಿರುವ ಅವರು, ನನ್ನನ್ನು ಹೊರಗೆ ಕಳಿಸಿದರೆ.. ಬಿಗ್ ಬಾಸ್ ಮನೆಯಲ್ಲಿ ನಡೆಸುವ ಎಲ್ಲಾ ರಹಸ್ಯಗಳನ್ನು ಬಹಿರಂಗಗೊಳಿಸುತ್ತೇನೆ. ಮುಂದೆ ಹೇಗೆ ಶೋ ನಡೆಸುತ್ತೀರಿ ಅಂತಾ ನೋಡುತ್ತೀನಿ ಎಂದು ಅವಾಜ್ ಹಾಕಿದ್ದಾರೆ.
ಇದೀಗ ಜಗದೀಶ್ ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಮಾಡಿಸಿ, ಡಿಗ್ರಿ ಮಾಡಿದ್ದಾರೆ. ಅಲ್ಲದೆ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿ, ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲಿಕೆ ಸನ್ನದು ಪಡೆದಿದ್ದಾರೆ.. ಹೀಗಾಗಿ ಅವರ ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.
ದಾಖಲಾತಿ ಪರಶೀಲನೆ ವೇಳೆ ಪಿಯುಸಿ ಅಂಕಪಟ್ಟಿ ನಕಲಿ ಎಂದು ತಿಳಿದು ಬಂದಿತ್ತು. ಹೀಗಾಗಿ ಕೆ.ಎನ್ ಜಗದೀಶ್ ಕುಮಾರ್ ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.