BigBoss Season11: ವಾರದ ಕತೆಯಲ್ಲಿ ಮೋಕ್ಷಿತಾ, ತ್ರಿವಿಕ್ರಮ್‌ಗೆ ಸರಿಯಾದ ಕ್ಲಾಸ್ ತೆಗೆದುಕೊಂಡ ಸುದೀಪ್‌

Sampriya

ಶನಿವಾರ, 7 ಡಿಸೆಂಬರ್ 2024 (16:13 IST)
Photo Courtesy X
ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ತ್ರಿವಿಕ್ರಮ್ ಹಾಗೂ  ಮೋಕ್ಷಿತಾಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದ ಗ್ಯಾರಂಟಿ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಎರಡು  ಪ್ರೋಮೋದಲ್ಲಿಯೂ ಕಿಚ್ಚ ಕೋಪದಲ್ಲಿಯೇ  ಮನೆಮಂದಿಯ ಜತೆ ವಾರದ ಲೆಕ್ಕಚಾರದ ಬಗ್ಗೆ ಮಾತನಾಡಿದ್ದಾರೆ.

ಮೋಕ್ಷಿತಾ ಅವರು ಈ ವಾರ ತನ್ನ ಸ್ವಾಭಿಮಾನ ಬಿಟ್ಟು ಕ್ಯಾಪ್ಟನ್ಸಿ ಟಾಸ್ಕ್ ಆಟವಾಡಲ್ಲ ಎಂದು ಬಿಗ್‌ಬಾಸ್ ನಿಯಮದ ವಿರುದ್ಧವೇ ಹೋಗಿದ್ದರು. ಈ ವಿಚಾರಕ್ಕೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.

ಮೊದಲ ಪ್ರೋಮೋದಲ್ಲಿ ಮೋಕ್ಷಿತಾ ಅವರು ಹೆಚ್ಚಾಗಿ ಬಳಸುವ ಅರ್ಥ ಆಯಿತಾ ಎಂಬ ವಾಕ್ಯದಲ್ಲೇ ವಾರದ ಕಥೆಯನ್ನು ಸುದೀಪ್ ಆರಂಭಿಸಿದ್ದಾರೆ.  ಅರ್ಥ ಆಯಿತಾ, ಅರ್ಥ ಆಯಿತಾ ಎಂದು ಊರಿಗೆಲ್ಲಾ ಕೇಳುವವರಿಗೆ ಇನ್ನೂ ಬಿಗ್‌ಬಾಸ್‌ನ ರಿಯಲ್ ಗೇಮ್ ಅರ್ಥನೇ ಆಗಿಲ್ಲ ಎಂದು ಮೋಕ್ಷಿತಾ ನಿರ್ಧಾರದ ಬಗ್ಗೆ ಗರಂ ಆಗಿದ್ದಾರೆ.  

ಇನ್ನೊಂದು ಕಡೆ ಈ ಗೇಮ್ ಅನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಭ್ರಮೆಯಲ್ಲಿರುವ ಇನ್ನೊಬ್ಬರಿಗೆ ಬಿಗ್‌ಬಾಸ್ ಮನೆಯ ನಿರ್ಧಾರದ ಮೇಲೆ ಗೌರವವಿಲ್ಲ ಎಂದು ತ್ರಿವಿಕ್ರಮ್‌ ಬಗ್ಗೆ ಕಿಚ್ಚ ಸುದೀಪ್ ಅಸಮಾಧಾನ ಹೊರಹಾಕಿದ್ದಾರೆ.  

ಈ ಪ್ರೋಮೋ ನೋಡಿದಾಗ ಇಂದಿನ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ವಾರದ ಲೆಕ್ಕಚಾರದಲ್ಲಿ ಎಡವಿದವರಿಗೆ ಸರಿಯಾಗಿಯೇ ಡೋಸ್ ಕೊಡುವ ಸೂಚನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ