ಕಣ್ಣೀರು ಹಾಕುತ್ತಲೇ ಮನೆಯಿಂದ ಹೊರ ನಡೆದ ಶೋಭಾ ಶೆಟ್ಟಿ: ಶಿಶಿರ್‌, ಐಶ್ವರ್ಯಾಗೆ ಅದೃಷ್ಟ ಎಂದ ಫ್ಯಾನ್ಸ್‌

Sampriya

ಸೋಮವಾರ, 2 ಡಿಸೆಂಬರ್ 2024 (19:41 IST)
Photo Courtesy X
ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇದೀಗ ಇಂಟ್ರೆಸ್ಟಿಂಗ್ ಆಗಿ ಹೊರಬರುತ್ತಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಶೋಭಾ ಶೆಟ್ಟಿ ಅವರು ಸೇವ್ ಆದರೂ ಕೊನೆ ಕ್ಷಣದಲ್ಲಿ ತಾನೂ ಮನೆಯಿಂದ ಹೊರಹೋಗುವುದಾಗಿ ಕಣ್ಣೀರು ಹಾಕಿದ್ದಾರೆ.

ಕೊನೆಯಲ್ಲಿ ಶಿಶಿರ್ ಹಾಗೂ ಐಶ್ವರ್ಯಾ ಅವರು ಮನೆಯಿಂದ ಹೊರಹಾಗಬೇಕಿತ್ತು. ಆದರೆ ಶೋಭಾ ಅವರು ಆರೋಗ್ಯದ ನೆಪವೊಡ್ಡಿ, ನನಗೆ ಇನ್ಮುಂದೆ ಇಲ್ಲಿ ಇರಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಶೋಭಾ ಅವರು ಸುದೀಪ್ ವರ್ತನೆಗೆ ಗರಂ ಆಗಿದ್ದು, ಸಿಟ್ಟಿನಲ್ಲೇ ಶೋವನ್ನು ಮುಗಿಸಿದ್ದಾರೆ. ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೋಭಾ ಅವರು ಮನೆಯಿಂದ ಹೊರಹೋಗಲು ಬಿಗ್‌ಬಾಸ್ ಅನುಮತಿ ನೀಡಿ, ಬಾಗಿಲನ್ನು ತೆರೆದಿದ್ದಾರೆ.

ಕಣ್ಣೀರು ಹಾಕುತ್ತಲೇ ಮನೆಯಿಂದ ಹೊರಬಂದ ಶೋಭಾ ಅವರು ಪ್ರೇಕ್ಷಕರಲ್ಲಿ ಕ್ಷಮೆಕೋರಿದ್ದಾರೆ. ಒಟ್ಟಾರೆ ಬಿಗ್‌ಬಾಸ್‌ ಮನೆಗೆ ಆವೇಷದಿಂದಲೇ ಎಂಟ್ರಿ ಕೊಟ್ಟ ಶೋಭಾ ಅವರು ಜನರ ನಿರೀಕ್ಷೆಯನ್ನು ಎರಡೇ ವಾರದಲ್ಲಿ ಹುಸಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ