BigBoss Season 11: ಮನೆಗೆ ಬೇಕಾದ್ರೆ ಹೋಗ್ತಿನಿ, ಗೌತಮಿ ಜತೆ ಆಟವಾಡಲ್ಲ, ಮೋಕ್ಷಿತಾ ಪಟ್ಟು

Sampriya

ಗುರುವಾರ, 5 ಡಿಸೆಂಬರ್ 2024 (16:46 IST)
Photo Courtesy X
ಬಿಗ್‌ಬಾಸ್‌ ಸೀಸನ್ 11ರಲ್ಲಿ ದೊಡ್ಮನೆಯ ಆಟ ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಆಗಿ ಹೊರಬರುತ್ತಿದೆ. ಫ್ರೆಂಡ್‌ಶಿಪ್‌ ಅತೀ ಆದರೆ ದೊಡ್ಮನೆಯಲ್ಲಿ ಆ ಸಂಬಂಧ ಹೆಚ್ಚು ದಿನ ಉಳಿಯಲ್ಲ ಎಂದು ಈಗಾಗಲೇ ಗೊತ್ತಾಗಿದೆ.  

ಗೌತಮಿ ಹಾಗೂ ಮೋಕ್ಷಿತಾ ಅವರು ಪ್ರಾರಂಭದಲ್ಲಿ ಒಳ್ಳೆಯ ಒಡನಾಟದೊಂದಿಗೆ ಆಟವಾಡುತ್ತಾ, ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಆದರೆ ಮೋಕ್ಷಿತಾ ಇದೀಗ ಮಂಜಣ್ಣ ಹಾಗೂ ಗೌತಮಿ ಅವರ ಫ್ರೆಂಡ್‌ಶಿಪ್‌ಗೆ ಗುಡ್‌ಬೈ ಹೇಳಿದ್ದಾರೆ.  ಇದೀಗ ನನ್ನ ಸ್ವಾಭಿಮಾನದ ಮುಂದೆ ಏನೂ ಇಲ್ಲ ಎಂದಿರುವ ಮೋಕ್ಷಿತಾ ಜೋಡಿಯಾಗಿ ಗೌತಮಿ ಜತೆ ಕ್ಯಾಪ್ಟನ್ಸಿ ಟಾಸ್ಕ್ ಆಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕ್ಯಾಪ್ಟನ್ ಆಗೋದಕ್ಕೆ ಗೌತಮಿ ಸಹಾಯ ತೆಗೆದುಕೊಳ್ಳಲೇ ಬೇಕಾ? ಹಾಗಾದ್ರೆ ನಾನು ಆಟವನ್ನೇ ಆಡೋದಿಲ್ಲ ಅಂತ ಮೋಕ್ಷಿತಾ ಹಠ ಹಿಡಿದಿದ್ದಾರೆ. ಕ್ಯಾಪ್ಟನ್ಸಿ ಓಟದಲ್ಲಿಇರಬೇಕು ಅಂದ್ರೆ, ಒಬ್ಬರನ್ನ ಸಹಾಯಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಎಲ್ಲರನ್ನ ತೆಗೆದುಕೊಂಡಿದ್ದಾರೆ. ಆದರೆ, ಕೊನೆಗೆ ಗೌತಮಿನೇ ಮೋಕ್ಷಿತಾ ಪಾಲಿಗೆ ಉಳಿದಂತೆ ಇದೆ. ಹಾಗಾಗಿಯೇ ಮೋಕ್ಷಿತಾ ಪೈ ಟೆನ್ಷನ್ ಮಾಡಿಕೊಂಡಿದ್ದಾರೆ.

ಹೌದು, ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್ ಆಗೋದೇ ಇಲ್ಲ. ಆ ರೀತಿನೇ ಇದ್ದರೇ, ಆಟವನ್ನೆ ಆಡೋದಿಲ್ಲ. ಈ ಆಟದಿಂದ ದೂರವೇ ಉಳಿಯುತ್ತೇನೆ. ಗೌತಮಿಯನ್ನ ಹೋಗಿ ನಾನು ಕೇಳೋದೇ ಇಲ್ಲ. ಅದು ನನಗೆ ಆಗೋದೇ ಇಲ್ಲ ಅಂತಲೇ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ