ಬಿಗ್ ಬಾಸ್ 14 : ನಟ ಸಲ್ಮಾನ್ ಖಾನ್ ಸಂಭಾವನೆ ಕೇಳಿದರೆ ಬೆಚ್ಚಿ ಬೀಳ್ತಿರಾ

ಗುರುವಾರ, 3 ಸೆಪ್ಟಂಬರ್ 2020 (10:26 IST)
ಬಿಗ್ ಬಾಸ್ ಸೀಸನ್ 14 ತೆರೆಗೆ ಬರಲು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಬಿಗ್ ಬಾಸ್ ಗಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಭಾವನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

ನಟ ಸಲ್ಮಾನ್ ಖಾನ್ ಅವರು ಕಲರ್ಸ್ ಮತ್ತು ಎಂಡೆಮೋಲ್ ಜೊತೆ 450 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ವ್ಯಾಪಾರ ತಜ್ಞರು ಅಂದಾಜಿಸಿದ್ದಾರೆ.

ಬಿಗ್ ಬಾಸ್ 14 ರ ಕಾರಣದಿಂದಾಗಿ ನಟ ಸಲ್ಮಾನ್ ಖಾನ್ 2020 ರ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಸೆಲೆಬ್ರಿಟಿ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ.

ನಟ ಸಲ್ಮಾನ್ ಗೆ 250 ಕೋಟಿ ರೂ. ಸಂಭಾವನೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದರೂ ಇದು ಸಲ್ಮಾನ್ ಖಾನ್ ಗೆ ಕಡಿಮೆ ಸಂಭಾವನೆ ನೀಡಲಾಗುತ್ತಿದೆ ಎಂಬ ವಾದವೂ ಕೇಳಿಬರತೊಡಗಿದೆ. ಆದರೆ ಅಭಿಮಾನಿಗಳು ಮಾತ್ರ ಬಿಗ್ ಬಾಸ್ ನೋಡಲು ಕಾತುರರಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ