ಬಿಗ್ ಬಾಸ್ ಪ್ರಸಾರ ಮುಂದೂಡಿಕೆ : ನಟ ಸಲ್ಮಾನ್ ಖಾನ್ ಗೆ ಏನಾಯ್ತು?

ಭಾನುವಾರ, 30 ಆಗಸ್ಟ್ 2020 (21:29 IST)
ಹಿಂದಿಯಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಸೀಸನ್ 14 ಸರಣಿ ಪ್ರಸಾರವಾಗೋದು ಮುಂದಕ್ಕೆ ಹೋಗುತ್ತಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡಲಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 14 ಗೆ ಕೊರೊನಾ ಆತಂಕ ಶುರುವಾಗಿದೆ.

ಹೊಸ ಸೀಸನ್ ಕುರಿತು ಈಗಾಗಲೇ ಪ್ರೋಮೋ ಬಿಡುಗಡೆಗೊಂಡಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ  ಸೆಪ್ಟಂಬರ್ ನಲ್ಲಿ ಬಿಗ್ ಬಾಸ್ ಆರಂಭವಾಗಬೇಕಿತ್ತು.

ಆದರೆ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಹಾನಿಯಾಗಿದೆ ಎನ್ನಲಾಗಿದೆ. ಹೀಗಾಗಿ ಬಿಗ್ ಬಾಸ್ ಮನೆ ದುರಸ್ತಿಗೊಳಿಸಿದ ಬಳಿಕ ಬಹುತೇಕವಾಗಿ ಅಕ್ಟೋಬರ್ ನಲ್ಲಿ ಸೀಸನ್ 14 ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ