ಹಾಟ್ ನಟಿ ಟಬು ಕೆಂಡಾಮಂಡಲವಾಗಿದ್ದೇಕೆ ಗೊತ್ತಾ..?

ಗುರುವಾರ, 24 ಆಗಸ್ಟ್ 2017 (20:09 IST)
ಪಾಕಿಸ್ತಾನದಿಂದ ರಕ್ಷಿಸಲ್ಪಟ್ಟ ಭಾರತೀಯ ಮಹಿಳೆ ಉಜ್ಮಾ ಅಹ್ಮದ್ ಬಯೋಪಿಕ್`ನಲ್ಲಿ ಸುಷ್ಮಾ ಸ್ವರಾಜ್ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳನ್ನ ಸ್ವತಃ ಟಬು ತಳ್ಳಿ ಹಾಕಿದ್ದಾರೆ.
 

ಧೀರಜ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟಿಸುವಂತೆ ನನ್ನನ್ನ ಯಾರೂ ಕೇಳಿಯೇ ಇಲ್ಲ, ಆ ರೀತಿಯ ಒಂದು ಚಿತ್ರ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಬಾಲಿವುಡ್ ನಟಿ ಟಬು ಹೇಳಿದ್ದಾರೆ. ಇದೇವೇಳೆ, ತಾನು ನಟಿಸುತ್ತಿದ್ದೇನೆಂಬ ಮಾಧ್ಯಮಗಳ ವರದಿಗಳ ಬಗ್ಗೆ ಕಿಡಿ ಕಾರಿರುವ ಟಬು, ಅವರ ಚಿತ್ರಗಳ ಬಗ್ಗೆ ಪ್ರಚಾರ ಪಡೆಯಲು ಇಂತಹ ಕೀಳುಮಟ್ಟದ ಪ್ರಚಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ನನ್ನನ್ನ ಸಂಪರ್ಕಿಸದೇ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಚಿತ್ರ ನಿರ್ಮಾಪಕರು ತಪ್ಪು ಸುದ್ದಿ ಯಾಕೆ ಹಬ್ಬಿಸಿದರು ಎಂಬುದು ನನಗೆ ಗೊತ್ತಿಲ್ಲ. ಹಿಂದೆ ಹಲವು ಬಾರಿ ಹೀಗೆ ನಡೆದಿದೆ. ಈಗಲೂ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ನಟಿಯರನ್ನ ಬಲವಂತವಾಗಿ ಒಪ್ಪಿಸಲು ನಿರ್ಮಾಪಕರು ಇಂತಹ ಟ್ರಿಕ್ಸ್ ಬಳಸುವುದುಂಟೂ ಎಂದೂ ಸಹ ಟಬು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ