ಶೊಯೇಬ್ ಅಖ್ತರ್ ಪ್ರಕಾರ ಈ ಭಾರತೀಯ ವಿನಯವಂತ!
ಒಂದು ಕಾಲದಲ್ಲಿ ಶಾರುಖ್ ಒಡೆತನದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಪರ ಐಪಿಎಲ್ ಆಡಿದ್ದ ಶೊಯೇಬ್ ಟ್ವಿಟರ್ ನಲ್ಲಿ ಶಾರುಖ್ ತಮ್ಮನ್ನು ಅಪ್ಪಿಕೊಂಡಿರುವ ಹಳೆಯ ಫೋಟೋ ಒಂದನ್ನು ಪ್ರಕಟಿಸಿದ್ದಾರೆ.
ಅಲ್ಲದೆ, ಫೋಟೋ ಜತೆಗೆ ನೀವು ಗೆಲ್ಲುತ್ತೀರೋ ಸೋಲುತ್ತೀರೋ ಮುಖ್ಯವಲ್ಲ. ಆದರೆ ಈ ವ್ಯಕ್ತಿಯೊಂದಿಗಿನ ನೆನಪು ಸದಾ ಸ್ಮರಣೀಯ. ಇವರು ಒಬ್ಬ ಗೆಳೆಯ, ಸೂಪರ್ ಸ್ಟಾರ್ ಮತ್ತು ವಿನಯವಂತ ಎಂದು ಶೊಯೇಬ್ ಶಾರುಖ್ ಗುಣಗಾನ ಮಾಡಿದ್ದಾರೆ.