ಪ್ಯಾಲೆಸ್ಟೀನ್‌ ಪರ ಪೋಸ್ಟ್ ಹಂಚಿ ಡಿಲೀಟ್ ಮಾಡಿದ ಬಾಲಿವುಡ್‌ ನಟಿ ಮಾಧುರಿ

sampriya

ಬುಧವಾರ, 29 ಮೇ 2024 (18:10 IST)
Photo By Instagram
ಮುಂಬೈ: ಇಸ್ರೇಲ್‌ ದೇಶದ ಸೇನಾಪಡೆಯು ಪ್ಯಾಲೆಸ್ಟೀನ್‌ನ ರಫಾ ಶಿಬಿರದ ಮೇಲೆ ಈಚೆಗೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ 40 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಅದರ ನಂತರದ ಆರಂಭವಾದ ಎಲ್‌ ಐಸ್‌ ಆನ್‌ ರಫಾ (ಎಲ್ಲರ ಕಣ್ಣು ರಫಾ ಮೇಲೆ) ಎಂಬ ಕ್ಯಾಂಪೇನ್‌ ಜಾಲತಾಣಗಳಲ್ಲಿ ಆರಂಭವಾಗಿದೆ.

ಇಸ್ರೇಲ್‌ನ ದಾಳಿಯನ್ನು ಖಂಡಿಸಿ, ಪ್ಯಾಲೆಸ್ಟೀನ್‌ ಪರವಾಗಿ ನಡೆಯುತ್ತಿರುವ ಈ ಕ್ಯಾಂಪೇನ್ ಪರವಾಗಿ ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಸೇರಿದಂತೆ ಬಾಲಿವುಡ್‌ನ ಹಲವು ತಾರೆಯರು ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಲವರಿಂದ ಟೀಕೆ ಬಂದ ಕೂಡಲೇ ಮಾಧುರಿ ದೀಕ್ಷಿತ್ ತಮ್ಮ ರೀಲ್ ಅನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

ಯಾರೊ ಕೆಲವರು ಏನೋ ಯೋಚಿಸುತ್ತಿದ್ದಾರೆ ಎಂಬ ಭಯದಿಂದ ಪೋಸ್ಟ್ ಮಾಡುವುದು ಮತ್ತು ಡಿಲೀಟ್ ಮಾಡುವುದು ಮತ್ತಷ್ಟು ಕರುಣಾಜನಕ ಎಂದು ಡಿಲೀಟ್‌ ಮಾಡಿದ್ದಕ್ಕೂ ಕೆಲವರು ಕಾಲೆಳೆದಿದ್ದಾರೆ.

ರಫಾ ಶಿಬಿರದ ಮೇಲೆ ದಾಳಿಗೆ ಹಲವು ದೇಶಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಂದಲೂ ವಿರೋಧ ವ್ಯಕ್ತವಾಗಿತ್ತು. ಛಿದ್ರಗೊಂಡಿರುವ ಮೃತದೇಹಗಳು ಮತ್ತು ಗಾಯಾಳುಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 'ಆಲ್‌ ಐಸ್‌ ಆನ್‌ ರಫಾ' ಎಂದು ಬರೆದಿರುವ ಒಂದು ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ