ಮುಂಬೈ: ಬಾಲಿವುಡ್ ನಟಿ, ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ ಅವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ 'ಆನ್ ಫೀಲ್ಡ್' ನಡವಳಿಕೆಗೆ ಫಿದಾ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅದಲ್ಲದೆ ಕ್ರಿಕೆಟಿಗ ರೋಹಿತ್ ಶರ್ಮಾ ಅವರು "ಪ್ರತಿಭೆಯ ಶಕ್ತಿಕೇಂದ್ರ" ಎಂದು ಹೊಗಳಿದ್ದಾರೆ.
ಪ್ರೀತಿ ಅವರು ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಲಾಹೋರ್ 1947' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಅದಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ತಮ್ಮ ತಂಡವನ್ನು ಬೆಂಬಲಿಸಲು ಆಗಾಗ್ಗೆ ಕ್ರಿಕೆಟ್ ಪಂದ್ಯಗಳಿಗೆ ಹಾಜರಾಗುತ್ತಿರುತ್ತಾರೆ.
ಎಕ್ಸ್‌ನಲ್ಲಿ ಪ್ರೀತಿ ಜಿಂಟಾ ಅವರಲ್ಲಿ ಅಭಿಮಾನಿಯೊಬ್ಬರು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಪ್ರೀತಿ ಜಿಂಟಾ ಅವರಲ್ಲಿ "ವಿರಾಟ್ ಕೊಹ್ಲಿ ಬಗ್ಗೆ ಏನಾದರೂ ಹೇಳಿ ಎಂದು ಕೇಳಿಕೊಂಡಿದ್ದಾರೆ.
ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, "ಮೈದಾನದಲ್ಲಿ ವಿರಾಟ್ ಅವರ ಆಕ್ರಮಣಶೀಲತೆ ಮತ್ತು ಗೆಲ್ಲುವ ಅವರ ದೃಢಸಂಕಲ್ಪವನ್ನು ತುಂಬಾ ಇಷ್ಟಪಡುತ್ತೇನೆ. ಅದಲ್ಲದೆ ಅವರು ಕುಟುಂಬಕ್ಕೆ ನೀಡುವ ಪ್ರೀತಿ ಹಾಗು ಅವರ ಡ್ಯಾನ್ಸ್ ಮೂವ್‌ಗಳನ್ನು ಇಷ್ಟಪಡುತ್ತೇನೆ. ಅವರು ಐಪಿಎಲ್‌ಗೆ ಬಂದಾಗ ಅವರ ಡ್ಯಾನ್ಸ್ ಮೂವ್‌ಗಳನ್ನು ಹೆಚ್ಚು ನೋಡುತ್ತಿದೆ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
ಅದಲ್ಲದೆ "ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬಗ್ಗೆ ಒಂದು ಮಾತು" ಎಂದು ಅಭಿಮಾನಿಯೊಬ್ಬರು ಕೇಳಿದಾಗ ಪ್ರೀತಿ ಜಿಂಟಾ ಅವರು ಕ್ರಿಕೆಟಿಗ ರೋಹಿತ್ ಶರ್ಮಾ ಬಗ್ಗೆಯೂ ಮಾತನಾಡಿದರು. ಅವರು "ಪ್ರತಿಭೆಯ ಶಕ್ತಿಕೇಂದ್ರ" ಎಂದು ಹೇಳಿದ್ದಾರೆ.
ಜಿಂಟಾ ಕೊನೆಯದಾಗಿ 2013 ರಲ್ಲಿ 'ಇಷ್ಕ್ ಇನ್ ಪ್ಯಾರಿಸ್' ಚಿತ್ರದಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು. ಅವರು 'ಕಲ್ ಹೋ ನಾ ಹೋ', 'ವೀರ್ ಝಾರಾ', 'ದಿಲ್ ಚಾಹ್ತಾ ಹೈ', 'ಕೋಯಿ... ಮಿಲ್ ಗಯಾ', 'ಲಕ್ಷ್ಯ', ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿ ಜಿಂಟಾ ತಮ್ಮ ನಟನೆಗೆ ಮರಳಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ, ಅವರು ಸನ್ನಿ ಡಿಯೋಲ್ ಸಹ-ನಟಿಸಿದ ವಿಭಜನೆಯ ನಾಟಕವಾದ 'ಲಾಹೋರ್ 1947' ಚಿತ್ರದ ಶೂಟಿಂಗ್‌ನಿಂದ ತೆರೆಮರೆಯ ಗ್ಲಿಂಪ್‌ಗಳನ್ನು ಹಂಚಿಕೊಂಡರು.