ಬಾಲಿವುಡ್ ನಟಿಯರ ಟ್ವಿಟ್ ವಾರ್ : ಕಂಗನಾ ರಣಾವತ್ ಗೆ ತಿವಿದ ಸ್ವರ ಭಾಸ್ಕರ್

ಬುಧವಾರ, 16 ಸೆಪ್ಟಂಬರ್ 2020 (18:40 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ಮಹಾರಾಷ್ಟ್ರ ಸರಕಾರವನ್ನು ಎದುರು ಹಾಕಿಕೊಂಡಿರುವ ನಟಿ ಕಂಗನಾಗೆ ಬಾಲಿವುಡ್ ನಟಿಯರು ಟಾಂಗ್ ನೀಡುತ್ತಿದ್ದಾರೆ.

ಜಯಾ ಬಚ್ಚನ್ ವಿರುದ್ಧ ಕಂಗನಾ ಮಾಡಿರುವ ಟೀಕೆಗೆ ನಟಿ ಸ್ವರ ಭಾಸ್ಕರ್ ಅವರು ಗರಂ ಆಗಿದ್ದಾರೆ.

 ಹಿರಿಯ ನಟಿ ವಿರುದ್ಧ ಕಂಗನಾ ರಣಾವತ್ ಅವರು ‘ಅನಾರೋಗ್ಯ ಮತ್ತು ನಾಚಿಕೆಗೇಡಿನ’ಟೀಕೆ ಮಾಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. ರಣಾವತ್ ತನ್ನ ‘ಕೊಳಕು ಆಲೋಚನೆಗಳನ್ನು’ ತನ್ನಲ್ಲಿಯೇ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ.
(ಚಿತ್ರಕೃಪೆ: ಫೇಸ್ ಬುಕ್)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ