ಪ್ರಿಯಾಮಣಿ ಸೊಂಟದ ವಿಷ್ಯ ಬೋನಿ ಕಪೂರ್‌ಗೆ ಬೇಕಿತ್ತಾ

Sampriya

ಶುಕ್ರವಾರ, 12 ಏಪ್ರಿಲ್ 2024 (18:27 IST)
Photo Courtesy X
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಬಹುಭಾಷಾ ನಟಿ ಪ್ರಿಯಾಮಣಿ ಜತೆ ಫೋಟೋಗೆ ಫೋಸ್ ಕೊಡುವಾಗ ಸೊಂಟದ ಮೇಲೆ ಕೈಯಿಟ್ಟು ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಈ ವಯಸ್ಸಿನಲ್ಲಿ ಈ ರೀತಿಯಾ ವರ್ತನೇ ಬೇಕಿತ್ತಾ ಎಂದು ಬೋನಿ ಅವರನ್ನು ಟೀಕಿಸಿದ್ದಾರೆ.

ಈ ಘಟನೆ  ಮೈದಾನ್​ ಸಿನಿಮಾದ ಸ್ಕ್ರೀನಿಂಗ್ ನಂತರ ನಡೆದಿದೆ. ಮೈದಾನ್‌ ಸಿನಿಮಾದಲ್ಲಿ ಪ್ರಿಯಾಮಣಿ ಅವರು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ವೀಕ್ಷಣೆಗೆ ಬಾಲಿವುಡ್ ಮಂದಿ ಬಂದಿದ್ದು, ಅಂದು ಪ್ರಿಯಾಮಣಿ ಸೀರೆಯಲ್ಲಿ ಮಿಂಚಿದರು.

ಸಿನಿಮಾ ನೋಡಿ ಹೊರಗಡೆ ಬಂದ ಬೋನಿ ಅವರು ಮಾಧ್ಯಮಕ್ಕೆ ಪ್ರಿಯಾಮಣಿ ಜತೆ ಫೋಟೋಗೆ ಪೋಸ್ ನೀಡಿದ್ದಾರೆ.   ಈ ವೇಳೆ ಕಪೂರ್​ ಅವರು ಪ್ರಿಯಾಮಣಿ ಸೊಂಟದ ಮೇಲೆ ಕೈಯಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ.

ಅದಲ್ಲದೆ ಇಬ್ಬರು ಹೆಣ್ಣು ಮಕ್ಕಳ ತಂದೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.  ಕೆಲವರು ಕಪೂರ್​ ಅವರನ್ನು ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್‌ಗೆ ಹೋಲಿಸಿದ್ದಾರೆ.

ಇನ್ನೂ ಬೋನಿ ಅವರು ಈ ಹಿಂದೆಯೂ ನಟಿಯರ ಜತೆ ನಡೆದುಕೊಳ್ಳುವ ರೀತಿ ಬಗ್ಗೆ ಟ್ರೋಲ್ ಆಗಿದ್ದರು.  2023ರಲ್ಲಿ ನೀತಾ ಅಂಬಾನಿ ಕಲ್ಚರಲ್ ಸೆಂಟರ್ದ ಕಾರ್ಯಕ್ರಮದಲ್ಲಿ ಮಾಡೆಲ್ ಗಿಗಿ ಹಡಿದ್ ಅವರ ಸೊಂಟದ ಮೇಲೆ ತನ್ನ ಕೈಯಿಟ್ಟ ಫೋಟೋ ವೈರಲ್ ಆಗಿತ್ತು.

ಅದಲ್ಲದೆ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಟಿ ಊರ್ವಶಿ ರೌಟೇಲಾ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪವೂ ಅವರ ಮೇಲೆ ಕೇಳಿಬಂದಿದೆ.

ಇನ್ನೂ ಬೋನಿ ಅವರು ಸೊಂಟದ ಮೇಲೆ ಕೈ ಹಾಕುವಾಗ ಪ್ರಿಯಾಮಣಿಗೆ ಮಜುಗುರ ಹಾಕುವ ಹಾಗೇ ವರ್ತಿಸಿದ್ದಾರೆಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಬೋನಿ ಕಪೂರ್ ಅವರು ಬಹುಭಾಷಾ ನಟಿ ಶ್ರೀದೇವಿ ಅವರ ಪತಿ. ಅವರ ಮಗಳು ಜಾಹ್ನವಿ ಕಪೂರ್​ ಕೂಡ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ