ನಟಿ ಪ್ರಿಯಾಮಣಿ, ಪೇಟಾದಿಂದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಯಾಂತ್ರಿಕ ಆನೆ ದಾನ

Sampriya

ಸೋಮವಾರ, 18 ಮಾರ್ಚ್ 2024 (18:52 IST)
Photo Courtesy Facebook
ಕೊಚ್ಚಿ:  ಕೇರಳದ ತ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಬಹುಭಾಷಾ ನಟಿ ಪ್ರಿಯಾಮಣಿ ಅವರು ಪೇಟಾ ಸಂಸ್ಥೆಯ ಜೊತೆಗೂಡಿ ಇಂದು ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ ಆನೆಯನ್ನು ದಾನ ನೀಡಿದರು. 
 
ಕಳೆದ ವರ್ಷ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ಯಾಂತ್ರಿಕ​ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತ್ತು. ಅದರಂತೆ ಮೊದಲ ಯಾಂತ್ರಿಕ ಆನೆ ತ್ರಿಶೂರ್ ದೇಗುಲದಲ್ಲಿ ಕಾಣಿಸಿಕೊಂಡಿತ್ತು. ಈ ಯಾಂತ್ರಿಕ ಆನೆಯ ಬೆಲೆ ₹5 ಲಕ್ಷ ಎಂದು ಹೇಳಲಾಗಿದೆ.
 
ನಟಿ ಪಪ್ರಿಯಾಮಣಿ ಅವರು ದಾನ ನೀಡಿರುವ ಯಾಂತ್ರಿಕ ಆನೆಗೆ ‘ಮಹಾದೇವನ್’​ ಎಂದು ನಾಮಕರಣ ಮಾಡಲಾಗಿದೆ.  
 
ಈ ಸಂಬಂಧ  ಪ್ರತಿಕ್ರಿಯಿಸಿದ ನಟಿ ಪ್ರಿಯಾಮಣಿ, 'ಪೇಟಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ನೀಡಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು' ಎಂದು ಖುಷಿ ವ್ಯಕ್ತ ಪಡಿಸಿದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ