ಮತ್ತೆ ಧಾರವಾಹಿಗೆ ಬಂದ ಬ್ರೋ ಗೌಡ
ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಗಿದು ಕೆಲವು ದಿನಗಳೇ ಆಗಿವೆ. ಆದರೂ ಜನ ಈಗಲೂ ಆ ಧಾರವಾಹಿಯನ್ನು ಮತ್ತು ವೈಷ್ಣವ್ ಪಾತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಜ ಜೀವನದಲ್ಲೂ ಸಿಂಗರ್ ಆಗಿರುವ ಬ್ರೋ ಗೌಡ ಈ ಧಾರವಾಹಿಯಲ್ಲೂ ಸಿಂಗರ್ ಆಗಿಯೇ ಕಾಣಿಸಿಕೊಂಡಿದ್ದರು.
ಎಲ್ಲರಿಗೂ ಗೊತ್ತಿರುವ ಹಾಗೆ ಭಾಗ್ಯ ಲಕ್ಷ್ಮಿ ಧಾರವಾಹಿಯೇ ಎರಡು ಕವಲೊಡೆದು ಲಕ್ಷ್ಮೀ ಬಾರಮ್ಮಾ ಧಾರವಾಹಿಯಾಗಿತ್ತು. ಇದೀಗ ಭಾಗ್ಯಲಕ್ಷ್ಮಿ ಧಾರವಾಹಿಗೆ ಬ್ರೋ ಗೌಡ ಕಮ್ ಬ್ಯಾಕ್ ಮಾಡಿದ್ದಾರೆ. ಅದೂ ಅತಿಥಿಯಾಗಿ.
ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ಭಾಗ್ಯ ತಂಗಿ ಪೂಜಾ ಮದುವೆ ಸೀನ್ ನಡೆಯುತ್ತಿದೆ. ಇಲ್ಲಿ ತಾಂಡವ್ ಮದುವೆ ತಡೆಯಲು ಎಂಟ್ರಿ ಕೊಡುತ್ತಾನೆ. ಆತನನ್ನು ತಡೆಯಲು ವೈಷ್ಣವ್ ಎಂಟ್ರಿ ಕೊಡುತ್ತಾನೆ. ಈ ಮೂಲಕ ಹಲವು ದಿನಗಳ ನಂತರ ಮತ್ತೆ ವೈಷ್ಣವ್ ನನ್ನು ತೆರೆ ಮೇಲೆ ನೋಡಿ ಜನರೂ ಖುಷಿಯಾಗಿದ್ದಾರೆ.