ಕ್ರೇಜಿಸ್ಟಾರ್ ರವಿಚಂದ್ರನ್ ಈ ನಟನ ನಿಜವಾದ ಗುರು, ದೈವವಂತೆ..!
ಮಂಗಳವಾರ, 22 ಆಗಸ್ಟ್ 2017 (11:43 IST)
ರವಿಚಂದ್ರನ್ ಅವರಿಂದಲೇ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಶಾಂತಿ ಕ್ರಾಂತಿ ಚಿತ್ರಕ್ಕಾಗಿ ಬಾಲನಟರನ್ನ ಆಯ್ಕೆ ಮಾಡಲು ನಮ್ಮ ಶಾಲೆಗೆ ಬಂದಿದ್ದ ರವಿಚಮದ್ರನ್ ನನ್ನನ್ನ ಆಯ್ಕೆಮಾಡಿದ್ದರು. ಆ ದಡಿಯಾನನ್ನ ಸೆಲೆಕ್ಟ್ ಮಾಡಿ ಎಂದು ಹೇಳಿದ್ದರು ಎಂದು ನಟ ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ಖಾಸಗಿ ವಾಹಿನಿಯ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ತಮ್ಮ 300ಕ್ಕೂ ಅಧಿಕ ಚಿತ್ರಗಳ ಸಿನಿ ಜರ್ನಿಯ ಕುತೂಹಲಕಾರಿ ಅಂಶಗಳನ್ನ ಬಿಚ್ಚಿಟ್ಟ ಬುಲೆಟ್ ಪ್ರಕಾಶ್, ರವಿಂಚಂದ್ರನ್ ಇಲ್ಲದಿದ್ದರೆ ನಾನು ಸಿನಿಮಾಗೆ ಎಂಟ್ರಿ ಕೊಡಲು ಸಾಧ್ಯವಿರುತ್ತಿರಲಿಲ್ಲ. ಅವರೇ ನನ್ನ ನಿಜವಾದ ಗುರು. ಚಿತ್ರರಂಗದಲ್ಲಿ ಬೆಳೆಯಲು ಬರೀ ಪ್ರಕಾಶ್ ಎಂದು ಹೆಸರಿದ್ದರೆ ಸಾಧ್ಯವಿಲ್ಲ. ಹೆಸರಿನ ಮುಂದೆ ಅಥವಾ ಹಿಂದೆ ಏನಾದರೂ ಸೇರಿಸಿಕೋ ಎಂದಿದ್ದರು. ನಾನು ಬುಲೆಟ್`ನಲ್ಲಿ ಬರುತ್ತಿದ್ದರಿಂದ ಅವರೇ ನನ್ನನ್ನ ಬುಲೆಟ್ ಪ್ರಕಾಶ್ ಎಂದು ಹೆಸರಿಸಿದವರು ಎಂದು ಹೇಳಿಕೊಂಡಿದ್ದಾರೆ.
ರವಿಂಚಂದ್ರನ್ ಅವರ ಜೊತೆಯೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬುಲೆಟ್ ಪ್ರಕಾಶ್ ಅವರ ಹೃದಯ ವೈಶಾಲ್ಯತೆಯನ್ನ ಹಾಡಿ ಹೊಗಳಿದ್ದಾರೆ. ಇದೇವೇಳೆ, 70 ಸಿನಿಮಾ ಮಾಡಿದ್ದರೂ ಹಣಕಾಸಿನ ಸಮಸ್ಯೆಯಿಂದ ನುಭವಿಸಿದ ಕಷ್ಟವನ್ನ ಅವರು ಹೇಳಿಕೊಂಡಿದ್ದಾರೆ. .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ