CCL2025: ನಾಳೆ ಚೆನ್ನೈ ವಿರುದ್ಧ ಪಂದ್ಯಕ್ಕೂ ಮುನ್ನಾ ನಾಡದೇವತೆಯ ಮೊರೆ ಹೋದ ಕಿಚ್ಚ ಸುದೀಪ್ ಬಳಗ

Sampriya

ಶುಕ್ರವಾರ, 28 ಫೆಬ್ರವರಿ 2025 (13:21 IST)
Photo Courtesy X
ಬೆಂಗಳೂರು: ನಾಳೆ ಮೈಸೂರಿನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯಲಿದೆ. ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್‌ ತಂಡದ ನಡುವೆ ಪಂದ್ಯಾಟ ನಡೆಯಲಿದೆ. ಈ ಹಿನ್ನೆಲೆ ಮೈಸೂರಿಗೆ ಆಗಮಿಸಿದ ಕಿಚ್ಚ ಸುದೀಪ್ ಪಡೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದರು.  

 ಸಿಸಿಎಲ್ ತಂಡದ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.‌ ಪಂದ್ಯಾಟಕ್ಕೂ ಮುನ್ನಾ ನಾಡಿನ ಶಕ್ತಿ ದೇವಿಯಾದ ಚಾಮುಂಡೇಶ್ವರಿಯ ಆಶೀರ್ವಾದವನ್ನು ಕಿಚ್ಚ ಸುದೀಪ್ ತಂಡ ಪಡೆಯಿತು.

ಸದ್ಯ ದೇಶದಲ್ಲಿ WPL, ICC Champion Trophy ಜತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಭಾರೀ ಹವಾ ಸೃಷ್ಟಿ ಮಾಡುತ್ತಿದೆ.

ಅಂದಹಾಗೆ, ನಟ ಸುದೀಪ್ ಅವರು ಮ್ಯಾಕ್ಸ್ ಸಕ್ಸಸ್ ಹಾಗೂ ಬಿಗ್‌ಬಾಸ್‌ ಸೀಸನ್ 11ರ ಬಳಿಕ ಇದೀಗ ಸಿಸಿಎಲ್‌ಬಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಅನೂಪ್ ಭಂಡಾರಿ ಜೊತೆ ಅವರು ಸಿನಿಮಾ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ