MAX Cinema ದೊಡ್ಡ ಪರದೆ ನೋಡಲು ಮಿಸ್ ಆದವರಿಗೆ ಗುಡ್‌ನ್ಯೂಸ್‌

Sampriya

ಬುಧವಾರ, 12 ಫೆಬ್ರವರಿ 2025 (17:30 IST)
Photo Courtesy X
ಕನ್ನಡ ನಟ ಕಿಚ್ಚ ಸುದೀಪ್ ಅವರ ಈಚೆಗೆ ಬಿಡುಗಡೆಕೊಂಡ ಸೂಪರ್ ಹಿಟ್ ಚಿತ್ರ  ಮ್ಯಾಕ್ಸ್‌  ಇದೀಗ ಒಟಿಟಿಗೆ ಲಗ್ಗೆಯಿಡುವ ಮುನ್ನಾ ಇದೀಗ ಟಿವಿಯಲ್ಲಿ ಪ್ರಸಾರಗೊಳ್ಳಲಿದೆ. ಈ ಮೂಲಕ ಕಿಚ್ಚ ಅಭಿಮಾನಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಮಿಸ್ ಆದವರಿಗೆ ಇದೀಗ ಟಿವಿ ಪರದೆ ಮೂಲಕ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಬಹುದು.

OTT ಪ್ರೀಮಿಯರ್‌ಗಿಂತ ಮುಂಚಿತವಾಗಿ ಅದರ ವಿಶ್ವ ಟೆಲಿವಿಷನ್ ಪ್ರೀಮಿಯರ್‌ನಲ್ಲಿ ಮಾಕ್ಸ್‌ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಕ್ಷನ್-ಥ್ರಿಲ್ಲರ್ ಝೀ ಕನ್ನಡದಲ್ಲಿ ಪ್ರೀಮಿಯರ್ ಮಾಡಲು ನಿರ್ಧರಿಸಲಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಭಾರೀ ಮೆಚ್ಚುಗೆ ಗಳಿಸಿತ್ತು.

ಜೀ ಕನ್ನಡದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಇದರ ಪ್ರಥಮ ಪ್ರದರ್ಶನವನ್ನು ಪ್ರಕಟಿಸಲಾಯಿತು. ಚಿತ್ರವು ಫೆಬ್ರವರಿ 15 ರಂದು ಸಂಜೆ 7:30 ಕ್ಕೆ ವಾಹಿನಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ

ವಿಜಯ್ ಕಾರ್ತಿಕೇಯ ನಿರ್ದೇಶನದ, ಮ್ಯಾಕ್ಸ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ಕಿಚ್ಚ ಸುದೀಪ್, ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ್ ಭಟ್ ನಟಿಸಿದ್ದಾರೆ. ಈ ಚಿತ್ರವನ್ನು ವಿ ಕ್ರಿಯೇಷನ್ಸ್ ಅಡಿಯಲ್ಲಿ ಕಲೈಪುಲಿ ಎಸ್ ಥಾನು ಮತ್ತು ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಸುದೀಪ್ ಜಂಟಿಯಾಗಿ ನಿರ್ಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ