ಬೆಳ್ಳಂ ಬೆಳಿಗ್ಗೆ ಡಿಕೆ ಶಿವಕುಮಾರ್ ಮನೆಗೆ ಭೇಟಿ ಕೊಟ್ಟ ಕಿಚ್ಚ ಸುದೀಪ್: ಕಾರಣ ಇಲ್ಲಿದೆ
ಕಿಚ್ಚ ಸುದೀಪ್ ರಾಜಕೀಯದಿಂದ ಆದಷ್ಟು ದೂರವೇ ಇರುತ್ತಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ಆಪ್ತರು ಎಂಬ ಕಾರಣಕ್ಕೆ ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ನಡೆಸಿದ್ದರು. ಅದು ಬಿಟ್ಟರೆ ಅವರು ರಾಜಕೀಯದಿಂದ ದೂರವೇ ಇದ್ದಾರೆ.
ಈ ನಡುವೆ ಇಂದು ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಆದರೆ ಡಿಕೆಶಿ ಭೇಟಿಯಾಗಿರುವುದಕ್ಕೂ ಕಾರಣವಿದೆ. ಅದು ಸಿಸಿಎಲ್ ಕ್ರಿಕೆಟ್ ಲೀಗ್ ಎನ್ನಲಾಗಿದೆ.
ಇನ್ನೇನು ಬಹುಭಾಷೆಗಳ ಸಿನಿಮಾ ಕಲಾವಿದರು ಭಾಗಿಯಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದ್ದು ಅದರ ಉದ್ಘಾಟನೆಗೆ ಡಿಕೆಶಿಗೆ ಆಹ್ವಾನ ನೀಡಲು ಬಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುದೀಪ್ ಸೇರಿದಂತೆ ಸಿಸಿಎಲ್ ನಲ್ಲಿ ಆಡಲಿರುವ ಕರ್ನಾಟಕ ತಂಡದ ಕಲಾವಿದರು ಅಭ್ಯಾಸ ಆರಂಭಿಸಿದ್ದಾರೆ.