ಕೊರೋನಾ ಸೋಂಕಿತರಾದ ಸಾಲು ಸಾಲು ಸೆಲೆಬ್ರಿಟಿಗಳು

ಸೋಮವಾರ, 10 ಜನವರಿ 2022 (11:40 IST)
ಬೆಂಗಳೂರು: ದೇಶದೆಲ್ಲಿ ಕೊರೋನಾ ಮತ್ತೆ ತಾಂಡವವಾಡಲು ಆರಂಭಿಸಿದೆ. ಈ ವಾರ ಅನೇಕ ಸೆಲೆಬ್ರಿಟಿಗಳು ಕೊರೋನಾ ಸೋಂಕಿತರಾದ ಸುದ್ದಿ ಬಂದಿದೆ.

ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿಗೆ ಎರಡನೇ ಬಾರಿಗೆ ಕೊರೋನಾ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿ ಮರಳಿ ಮನೆಯಲ್ಲಿ ಕ್ವಾರಂಟೈನ್ ಗೊಳಗಾಗಿದ್ದಾರೆ. ಇದೀಗ ಅವರ ಪುತ್ರಿ, ಕುಟುಂಬಸ್ಥರಿಗೂ ಕೊರೋನಾ ಹರಡಿದೆ.

ಬಾಲಿವುಡ್ ಜೋಡಿ ಜಾನ್ ಅಬ್ರಹಾಂ ಮತ್ತು ಪ್ರಿಯಾ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲದೆ, ಬಾಲಿವುಡ್ ನಲ್ಲಿ ಏಕ್ತಾ ಕಪೂರ್, ಸ್ವರ ಭಾಸ್ಕರ್ ಮತ್ತು ಕುಟುಂಬಸ್ಥರಿಗೂ ಕೊರೋನಾ ತಗುಲಿದ ಸುದ್ದಿ ಬಂದಿದೆ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಪ್ರಿನ್ಸ್ ಮಹೇಶ್ ಬಾಬು ಈಗ ಅಲ್ಪ ಪ್ರಮಾಣದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ.  ಸಂಗೀತ ನಿರ್ದೇಶಕ ತಮನ್ ಎಸ್., ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸೇರಿದಂತೆ ಇನ್ನೂ ಅನೇಕ ತಾರೆಯರು ಕೊರೋನಾ ಸೋಂಕಿಗೊಳಗಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರೂ ಕೊರೋನಾ ಬಗ್ಗೆ ಎಚ್ಚರಿಕೆಯಿಂದಿರುವುದು ಸೂಕ್ತ ಎಂದು ಸಂದೇಶ ನೀಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ