ಕೆಜಿಎಫ್ ನಿರ್ಮಾಪಕರ ಮೇಲೆ ಯಶ್ ಅಭಿಮಾನಿಗಳ ಬೇಸರ

ಭಾನುವಾರ, 9 ಜನವರಿ 2022 (09:43 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ನಿನ್ನೆ ಕೆಜಿಎಫ್ 2 ಸಿನಿಮಾ ತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಇದನ್ನು ನೋಡಿ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೇ ಪಕ್ಷ ಯಶ್ ಹುಟ್ಟುಹಬ್ಬಕ್ಕಾದರೂ ಕೆಜಿಎಫ್ 2 ತಂಡ ಹೊಸದಾಗಿ ಏನಾದರೂ ಸುದ್ದಿ ಕೊಡಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಆದರೆ ನಿನ್ನೆ ಬಿಡುಗಡೆಯಾದ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

ಸಾಧಾರಣ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿರುವುದು ನೋಡಿ, ನಾವು ಎಷ್ಟೆಲ್ಲಾ ನಿರೀಕ್ಷೆಯಿಟ್ಟುಕೊಂಡಿದ್ದೆವು. ನಿಮ್ಮ ಪೋಸ್ಟರ್ ನೋಡಿದರೆ ಇದಕ್ಕಿಂತ ನಮ್ಮ ಸಿಡಿಪಿಯೇ ಮೇಲು ಎನಿಸುತ್ತದೆ. ನೀವು ನಿರಾಸೆ ಮಾಡಿಬಿಟ್ಟಿರಿ ಎಂದು ನಿರ್ಮಾಪಕರ ವಿರುದ್ಧ ಬೇಸರ ಹೊರಹಾಕಿದ್ದಾರೆ. ಕೊನೇ ಪಕ್ಷ ಮೇಕಿಂಗ್ ವಿಡಿಯೋನಾದ್ರೂ ಹಾಕಬಹುದಿತ್ತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ