ಬರ್ತ್ ಡೇ ನನಗೆ ಸಂಭ್ರಮವೆನಿಸಲ್ಲ: ಎಲ್ಲಾ ಮಕ್ಕಳಿಗಾಗಿ ಎಂದ ರಾಕಿ ಭಾಯಿ ಯಶ್
ಪತ್ನಿ, ರಾಧಿಕಾ ಮತ್ತು ಪುತ್ರಿ ಐರಾ, ಪುತ್ರ ಯಥರ್ವ್ ಜೊತೆಗೆ ಕೇಕ್ ಕಟಿಂಗ್ ಮಾಡುವ ಫೋಟೋಗಳನ್ನು ಹಂಚಿಕೊಂಡಿರುವ ಯಶ್, ಬರ್ತ್ ಡೇ ನನಗೆ ಯಾವತ್ತೂ ಸಂಭ್ರಮದ ದಿನ ಅಂತ ಅನಿಸಿಲ್ಲ.
ಆದರೆ ನನ್ನ ಮಕ್ಕಳು ಮತ್ತು ನನ್ನ ಸುತ್ತಮುತ್ತಲಿರುವವರಿಗಾಗಿ ಈ ದಿನವನ್ನು ಆಚರಿಸಿಕೊಳ್ಳುತ್ತೇನಷ್ಟೇ. ನನಗೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಯಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.