ಏನೇ ಬರ್ಲಿ, ಥಿಯೇಟರ್ ನಲ್ಲಿಯೇ ವಿಕ್ರಾಂತ್ ರೋಣ ರಿಲೀಸ್
ಈ ಬಗ್ಗೆ ನಿರ್ಮಾಪಕ ಜ್ಯಾಕ್ ಮಂಜು ಕೂಡಾ ಒಟಿಟಿಯಿಂದ ಆಫರ್ ಬಂದಿರುವುದು ನಿಜ. ಆದರೆ ಇದುವರೆಗೆ ಈ ಬಗ್ಗೆ ತೀರ್ಮಾನ ನಡೆಸಿಲ್ಲ ಎಂದಿದ್ದರು.
ಫೆಬ್ರವರಿ 24 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗುವುದಾಗಿ ಘೋಷಣೆಯಾಗಿತ್ತು. ಆದರೆ ಅದರ ಬೆನ್ನಲ್ಲೇ ಕೊರೋನಾದಿಂದಾಗಿ ಥಿಯೇಟರ್ ನ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಒಟಿಟಿಯಲ್ಲಿ ರಿಲೀಸ್ ಆಗುವ ಬಗ್ಗೆ ರೂಮರ್ ಹರಡಿತ್ತು. ಇದೀಗ ಚಿತ್ರತಂಡ ಏನೇ ಆದರೂ ಥಿಯೇಟರ್ ನಲ್ಲಿಯೇ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದೆ. ಹೀಗಾಗಿ 3ಡಿ ಇಫೆಕ್ಟ್ ನಲ್ಲಿ ವಿಕ್ರಾಂತ್ ರೋಣನನ್ನು ಥಿಯೇಟರ್ ನಲ್ಲಿ ವೀಕ್ಷಿಸಬಹುದು.