ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ತಾನು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ನಿಂದ ಮಾರಣಾಂತಿಕ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕೋರ್ಟ್ ಎದುರು ಒಪ್ಪಿಕೊಂಡ ಬೆನ್ನಲ್ಲೇ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಲಸಿಕೆಯಿಂದ ರಕ್ತನಾಳಗಳಲ್ಲಿ ಬ್ಲಡ್ಕ್ಲಾಟ್ ಆಗಿ ಹೃದಯಾಘಾತವಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ 2021ಈಚೆಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಸೆಲೆಬ್ರಿಟಗಳ ಸಾವು ಚರ್ಚೆಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಈ ಬಗ್ಗೆ ಚರ್ಚೆಗಳು ಜೋರಾಗುತ್ತಿದೆ. 2021ರಲ್ಲಿ ಮೃತಪಟ್ಟ ಪುನೀತ್ ರಾಜ್‌ಕುಮಾರ್, ಬಿಗ್‌ಬಾಸ್ ಹಿಂದಿ ಸೀಸನ್ 13ರ ವಿಜೇತ ಸಿದ್ದಾರ್ಥ್ ಶುಕ್ಲಾ, ಖ್ಯಾತ ಬಾಲಿವುಡ್ ಗಾಯಕ ಕೆಕೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದೀಗ ಇವರ ಸಾವಿಗೆ ಕೋವಿಶೀಲ್ಡ್ ಅಡ್ಡಪರಿಣಾಮವೇ ಎಂದು ಪ್ರಶ್ನೆ ಎತ್ತಿದ್ದಾರೆ.
ಕನ್ನಡದ ಯುವರತ್ನ, ನಗುವಿನ ಸರದಾರ ಪುನೀತ್ ರಾಜಕುಮಾರ್ ಅವರು 2021ರ ಏಪ್ರಿಲ್ 7ರಂದು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು. ಇದಾದ ಕೆಲವೇ ತಿಂಗಳಿನಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು. ಇದೀಗ ಇವರ ಸಾವಿಗೂ ಕೋವಿಡ್ ಲಸಿಕೆ ಅಡ್ಡಪರಿಣಾಮವಾಗಿರಹುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಕೋವಿಡ್‌ಶೀಲ್ಡ್ ಲಸಿಕೆ ಬಗ್ಗೆ ಸಂಸ್ಥೆ ಹೇಳಿಕೆ ಹೀಗಿದೆ:
ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟಾಗಬಹುದು ಎಂದು ಸಂಸ್ಥೆ ಹೇಳಿದೆ. ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ ಎಂದು ಸಂಸ್ಥೆ ಹೇಳಿದೆ. ಈ ಸಿಂಡ್ರೋಮ್ ಕಾಣಿಸಿಕೊಂಡರೆ ದೇಹದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿ ಪಾರ್ಶ್ವವಾಯು, ಹೃದಯಸ್ತಂಭನ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿಕೊಂಡಿದೆ.