ಚಂದ್ರನ ಅಂಗಳದಲ್ಲಿ ಭಾರತದ ‘ವಿಕ್ರಮ’: ಸಂಭ್ರಮಿಸಿದ ಸೆಲೆಬ್ರಿಟಿಗಳು

ಬುಧವಾರ, 23 ಆಗಸ್ಟ್ 2023 (20:18 IST)
ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ರವಾನಿಸಿದ ವಿಕ್ರಮ್ ಲ್ಯಾಂಡರ್ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿದಿದೆ.

ಇಂದು ಸಂಜೆ ನಡೆದ ಈ ವಿದ್ಯಮಾನಕ್ಕೆ ಇಡೀ ಭಾರತವೇ ಕಾತುರದಿಂದ ಕಾಯುತ್ತಿತ್ತು. ಕೊನೆಗೂ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನಲ್ಲಿ ಕಾಲಿಡುತ್ತಿದ್ದಂತೇ ಸೆಲೆಬ್ರಿಟಿಗಳು ಸೇರಿದಂತೆ ದೇಶದ ಜನತೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಯಿತು.

ಭಾರತ ಇಂತಹದ್ದೊಂದು ಸಾಧನೆ ಮಾಡುತ್ತಿದ್ದಂತೇ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಆದಾ ಶರ್ಮಾ, ಹೃತಿಕ್ ರೋಷನ್, ರಾಕಿಂಗ್ ಸ್ಟಾರ್ ಯಶ್, ಜ್ಯೂ.ಎನ್ ಟಿಆರ್, ಮೋಹನ್ ಲಾಲ್ ಸೇರಿದಂತೆ ನಟ-ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಹೆಮ್ಮೆಯ ಕ್ಷಣವನ್ನು ಸಂಭ್ರಮಿಸಿ ಸಂದೇಶ ಬರೆದಿದ್ದಾರೆ.

ಇನ್ನು ಕ್ರೀಡಾ ತಾರೆಯರೂ ಈ ಸಂಭ್ರಮವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್, ಪಿ.ವಿ. ಸಿಂಧು, ಸಾನಿಯಾ ಮಿರ್ಜಾ, ಕೆಎಲ್ ರಾಹುಲ್, ಸುರೇಶ್ ರೈನಾ, ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರೀಡಾ ಪಟುಗಳೂ ಸಂಭ್ರಮಿಸಿದ್ದಾರೆ. ಇನ್ನು, ಐರ್ಲೆಂಡ್ ನಲ್ಲಿ ಟಿ20 ಸರಣಿಗೆ ಸಜ್ಜಾಗುತ್ತಿದ್ದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿರುವ ಟಿವಿಯಲ್ಲಿ ಚಂದ್ರಯಾನ 3 ಲೈವ್ ಕ್ಷಣಗಳನ್ನು ಜೊತೆಯಾಗಿ ವೀಕ್ಷಿಸಿ ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ