ಚಂದನ್ ಆಚಾರ್ ಹೊಸ ಸಿನಿಮಾ ತುಂಬಾ ಕಿಚ್ಚ ಸುದೀಪ್! ಕಿಚ್ಚನಿಗೆ ಖುಷಿಯೋ ಖುಷಿ
ಸಲೂನ್ ಇಟ್ಟುಕೊಂಡಿರುವ ನಾಯಕನಿಗೆ ಒಂದಲ್ಲಾ ಒಂದು ದಿನ ಕಿಚ್ಚ ಸುದೀಪ್ ಗೆ ಹೇರ್ ಸ್ಟೈಲ್ ಮಾಡಬೇಕೆಂಬ ಆಸೆ ಎಂಬುದು ಈ ಟ್ರೈಲರ್ ನಲ್ಲಿ ಗೊತ್ತಾಗುತ್ತದೆ. ಟ್ರೈಲರ್ ನೋಡಿದ ಕಿಚ್ಚ ಸುದೀಪ್ ಭಾರೀ ಇಷ್ಟಪಟ್ಟಿದ್ದು, ನನ್ನನ್ನೂ ಈ ಸಿನಿಮಾದ ಭಾಗವಾಗಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ. ಈ ಚಿತ್ರ ಈ ತಿಂಗಳ ಅಂತ್ಯಕ್ಕೆ ತೆರೆ ಕಾಣುವ ಸಾಧ‍್ಯತೆಯಿದೆ.