ಡಿಲೀಟ್ ಮಾಡಿದರೂ ಚಂದನ್ ಶೆಟ್ಟಿ ಕೋಲುಮಂಡೆ ಹಾಡು ಯೂ ಟ್ಯೂಬ್ ನಲ್ಲಿ ಪತ್ತೆ

ಬುಧವಾರ, 26 ಆಗಸ್ಟ್ 2020 (11:38 IST)
ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ‘ಕೋಲುಮಂಡೆ’ ಹಾಡು ಸಾಕಷ್ಟು ವಿವಾದ ಸೃಷ್ಟಿಸಿದೆ. ಮಾದಪ್ಪನ ಹಾಡಿಗೆ ಚಂದನ್ ಅಪಚಾರ ಎಸಗಿದ್ದಾರೆಂದು ಮಾದಪ್ಪನ ಭಕ್ತರು ಅಪಸ್ವರವೆತ್ತಿದ ಬೆನ್ನಲ್ಲೇ ಕ್ಷಮೆ ಯಾಚಿಸಿದ ಚಂದನ್ ಹಾಡನ್ನು ರಿಲೀಸ್ ಮಾಡಿದ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಿಂದ ಡಿಲೀಟ್ ಮಾಡಿದ್ದಾರೆ.


ಹಾಗಿದ್ದರೂ ಹಾಡು ಯೂ ಟ್ಯೂಬ್ ನಲ್ಲಿ ಓಡಾಡುತ್ತಿದೆ. ಕೆಲವರು ಈ ಹಾಡಿನಲ್ಲಿ ಏನೂ ತೊಂದರೆಯಿಲ್ಲ. ಆದರೆ ಇದಕ್ಕೆ ಚಿತ್ರೀಕರಿಸಿರುವ ವಿಡಿಯೋ ಅಶ್ಲೀಲವಾಗಿದೆ ಎಂದು ಅಪಸ್ವರವೆತ್ತಿದ್ದಾರೆ. ಏನೇ ಆದರೂ ಹಿಟ್ ಹಾದಿಯಲ್ಲಿದ್ದ ಈ ಹಾಡು ವಿವಾದದ ಕೇಂದ್ರ ಬಿಂದುವಾಗಿರುವುದು ನಿಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ