ಇಂದಿನಿಂದ ಟಿವಿ ಕಾರ್ಯಕ್ರಮಗಳಲ್ಲಿ ಮಹತ್ವದ ಬದಾಲವಣೆ

ಸೋಮವಾರ, 6 ಏಪ್ರಿಲ್ 2020 (09:26 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಕಿರುತೆರೆಯಲ್ಲೂ ಚಿತ್ರೀಕರಣಗಳು ನಡೆಯದೇ ಧಾರವಾಹಿಗಳು, ರಿಯಾಲಿಟಿ ಶೋಗಳು ಅರ್ಧಕ್ಕೇ ಪ್ರಸಾರ ನಿಲ್ಲಿಸಿವೆ. ಆದರೆ ಈ ಸಮಯದಲ್ಲಿ ಹಳೇ ಕಾರ್ಯಕ್ರಮಗಳನ್ನು ಮತ್ತೆ ಮರುಪ್ರಸಾರ ಮಾಡಲು ಟಿವಿ ವಾಹಿನಿಗಳು ನಿರ್ಧರಿಸಿವೆ.


ಸ್ಟಾರ್ ಸುವರ್ಣ ವಾಹಿನಿ ಸಂಜೆಯಿಂದ ರಾತ್ರಿವರೆಗೆ ಎಂದಿನ ಧಾರವಾಹಿಗಳ ಪ್ರಸಾರ ಮಾಡಲು ಸಾಧ‍್ಯವಿಲ್ಲದ ಕಾರಣ ಸಿನಿಮಾಗಳು, ಹಾಟ್ ಸ್ಟಾರ್ ಆಪ್ ನಲ್ಲಿರುವ ವೆಬ್ ಸೀರೀಸ್, ಹಳೆಯ ಧಾರವಾಹಿಗಳನ್ನು ಪ್ರಸಾರ ಮಾಡಲಿವೆ.

ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಗಳೂ ಹಳೆಯ ಧಾರವಾಹಿಗಳು, ಕಾರ್ಯಕ್ರಮಗಳನ್ನು ಮರಳಿ ಪ್ರಸಾರ ಮಾಡುವುದಾಗಿ ನಿರ್ಧರಿಸಿದೆ.

ಇನ್ನು ಜೀ ಕನ್ನಡ ವಾಹಿನಿ ಕೂಡಾ ಮಹತ್ವದ ಬದಲಾವಣೆ ಮಾಡಿದ್ದು ಹಗಲು ಹೊತ್ತು ಹಳೆಯ ರಿಯಾಲಿಟಿ ಶೋಗಳಾದ ಕಾಮಿಡಿ ಕಿಲಾಡಿಗಳು, ಡ್ರಾಮಾ ಜ್ಯೂನಿಯರ್ಸ್, ಛೋಟಾ ಚಾಂಪಿಯನ್ ಇತ್ಯಾದಿಗಳನ್ನು ಪ್ರಸಾರ ಮಾಡಲಿವೆ. ರಾತ್ರಿ ವೇಳೆ ಸಂಜೆ 6 ರಿಂದ 8 ಗಂಟೆಯವರೆಗೆ ಜೊತೆ ಜೊತೆಯಲಿ ಧಾರವಾಹಿಯ ಒಂದನೇ ಕಂತಿನಿಂದ ಇಂದಿನವರೆಗಿನ ಕಂತುಗಳನ್ನು ಮರು ಪ್ರಸಾರ ಮಾಡಲಿದೆ. ಅದಾದ ಬಳಿಕ ಕಮಲಿ, ಪಾರು, ಗಟ್ಟಿಮೇಳ ಧಾರವಾಹಿಗಳನ್ನು ಪ್ರಸಾರ ಮಾಡಲಿವೆ. ಈ ನಡುವೆ ಇನ್ನೂ ಹಳೆಯ ಜನಪ್ರಿಯ ಧಾರವಾಹಿಗಳನ್ನು ಮರಳಿ ಪ್ರಸಾರ ಮಾಡುವಂತೆ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆಯಿಟ್ಟಿದ್ದಾರೆ. ಚಿತ್ರೀಕರಣ ಸದ್ಯಕ್ಕೆ ಸಾಧ‍್ಯವಾಗದೇ ಹೋದರೆ ಅದನ್ನೂ ಮಾಡುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ