ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಪ್ರವಾಹ
ಹೀಗಾಗಿ ಲಾಕ್ ಡೌನ್ ಬಳಿಕ ಸ್ಟಾರ್ ನಟರು, ಹೊಸಬರ ಸಿನಿಮಾಗಳು ಒಂದೊಂದಾಗಿ ಬಿಡುಗಡೆಯಾಗಲಿವೆ. ಇದರಲ್ಲಿ ಪ್ರಮುಖವಾಗಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ದರ್ಶನ್ ಅಭಿನಯದ ರಾಬರ್ಟ್, ಧ್ರುವ ಸರ್ಜಾ ಅಭಿನಯದ ಪೊಗರು, ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಮುಂತಾದ ಪ್ರಮುಖ ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ಎಲ್ಲಾ ಸ್ಟಾರ್ ಸಿನಿಮಾಗಳು ಒಟ್ಟಿಗೇ ಬಿಡುಗಡೆಯಾದರೆ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಆದರೆ ಅನಿವಾರ್ಯವಾಗಿ ಇದನ್ನು ಮಾಡಲೇಬೇಕಾದ ಸ್ಥಿತಿ ಎದುರಾಗಿದೆ.