ಉಪಾಧ್ಯಕ್ಷ ಚಿಕ್ಕಣ್ಣ ಜೊತೆ ಎಡವಟ್ ಲೀಲಾ ರೊಮ್ಯಾನ್ಸ್!

ಗುರುವಾರ, 16 ಜೂನ್ 2022 (16:17 IST)
ಬೆಂಗಳೂರು: ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ ಈಗ ನಾಯಕ ನಟನಾಗಿ ಬಡ್ತಿ ಪಡೆಯುತ್ತಿರುವ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಸಿನಿಮಾಗೆ ಇಂದು ಮುಹೂರ್ತ ಕಾರ್ಯಕ್ರಮ ನೆರವೇರಿದೆ.

ಚಿಕ್ಕಣ್ಣ ಹೊಸ ಸಿನಿಮಾಗೆ ಇಂದು ದೇವಾಲಯದಲ್ಲಿ ಸರಳವಾಗಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಈ ಸಿನಿಮಾ ಮೂಲಕ ಚಿಕ್ಕಣ್ಣ ಸೋಲೋ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ.

ಈ ಸಿನಿಮಾದಲ್ಲಿ ಚಿಕ್ಕಣ್ಣಗೆ ನಾಯಕಿಯಾಗಿ ಕಿರುತೆರೆಯ ಹಿಟ್ಲರ್ ಕಲ್ಯಾಣ ಧಾರವಾಹಿಯ ನಾಯಕಿ ಎಡವಟ್ ಲೀಲಾ ಖ್ಯಾತಿಯ ಮಲೈಕಾ ಅಭಿನಯಿಸಲಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ