ಅಮ್ಮ ಎಂದು ಹೇಳಿಕೊಟ್ಟರೂ ಅಪ್ಪ ಎನ್ನುವ ಚಿರು ಪುತ್ರ: ರಾಯನ್ ಹೊಸ ವಿಡಿಯೋ ವೈರಲ್
ಮೇಘನಾ ಕೆಲವು ಸಮಯದ ಹಿಂದೆ ರಾಯನ್ ಗೆ ಅಮ್ಮ ಮತ್ತು ಅಪ್ಪ ಎಂದು ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಈಗ ರಾಯನ್ ಕೊಂಚ ದೊಡ್ಡವನಾಗಿದ್ದಾನೆ. ಈಗ ಅವನು ಅಮ್ಮ ಎಂದೂ ಹೇಳುತ್ತಿದ್ದಾನೆ.
ಆದರೆ ಮೇಘನಾ ಈಗ ಪ್ರಕಟಿಸಿರುವ ವಿಡಿಯೋದಲ್ಲಿ ಅಮ್ಮ ಮತ್ತು ಅಪ್ಪ ಎಂದು ಹೇಳು ಎಂದು ರಾಯನ್ ಗೆ ಮೇಘನಾ ಹೇಳಿದರೆ ಒಮ್ಮೆ ಮಾತ್ರ ಅಮ್ಮ ಎಂದು ಮತ್ತೆ ಅಪ್ಪ ಎನ್ನುತ್ತಿದ್ದಾನೆ. ರಾಯನ್ ಗೆ ಒಮ್ಮೆಯೂ ತಂದೆಯನ್ನು ನೋಡುವ ಭಾಗ್ಯವಿಲ್ಲ. ಹಾಗಿದ್ದರೂ ಅಪ್ಪನ ಮೇಲಿನ ಅವನ ಪ್ರೀತಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.